ಜಟ್ಟಿಪಳ್ಳದಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ

0

ಸುಳ್ಯದ ಜಟ್ಟಿಪಳ್ಳ ಶಾಲೆಯಲ್ಲಿ ಯಕ್ಷ ಭಾಗವತಿಕೆ ಕಲಾ ತಂಡದ ಆಶ್ರಯದಲ್ಲಿ ಯಕ್ಷಗಾನ ಭಾಗವತಿಕೆ ತರಗತಿಯು ನ.09ರಂದು ಜಟ್ಟಿಪಳ್ಳದ ಯುವಸದನದಲ್ಲಿ ಉದ್ಘಾಟನೆಗೊಂಡಿತು.

ಭಾಗವತಿಕೆ ಗುರುಗಳಾದ ಸುಬ್ರಾಯ ಸಂಪಾಜೆ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಸುಳ್ಯ ಸುದ್ದಿ ಬಿಡುಗಡೆ ವಾರಪತ್ರಿಕೆಯ ಸಂಪಾದಕರಾದ ಹರೀಶ್ ಬಂಟ್ವಾಳ್, ಕಪಿಲ ಯುವಕ ಮಂಡಲ ಜಟ್ಟಿಪಳ್ಳ ಇದರ ಕಾನೂನು ಸಲಹೆಗಾರರದ ತನುದೀಪ್ ಪೆಲ್ತಡ್ಕ ಉಪಸ್ಥಿತರಿದ್ದರು.

ಯಕ್ಷ ಭಾಗವತಿಕೆ ಕಲಾ ತಂಡ ಸುಳ್ಯ ಇದರ ವ್ಯವಸ್ಥಾಪಕ ಚಂದ್ರಶೇಖರ ಪೆರಾಜೆ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಶಿಕಾಂತ್ ಮುಳ್ಯಕಜೆ ಪ್ರಾರ್ಥಿಸಿದರು. ಶ್ರೀಮತಿ ಮಮತಾ ರವೀಶ್ ಪಡ್ಡಂಬೈಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.