ಇಸ್ರೋ ವಿಜ್ಞಾನಿಯಿಂದ ಕಾರ್ಯಕ್ರಮ ಉದ್ಘಾಟನೆ, ಎಸ್ ಎಸ್ ಎಲ್ ಸಿ ಗಣಿತ ಸಾಧಕರಿಗೆ ಸನ್ಮಾನ
ಜನಾರ್ದನ ಮಾಸ್ಟರ್ ಗಣಿತ ಕೇಂದ್ರ (ರಿ. ಸುಳ್ಯ,ಅಮೃತ ಮಹೋತ್ಸವ ಸಮಿತಿ-2025 ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಗಣಿತ ಹಬ್ಬ-2025 ಕಾರ್ಯಕ್ರಮ ನ.23 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಜ್ಞಾನಿಗಳು ಹಾಗೂ ಡಿಪ್ಯೂಟಿ ಪ್ರಾಜೆಕ್ಟ್ ಡೈರೆಕ್ಟರ್ ಬೆಂಗಳೂರು ಇದರ ವೇಣುಗೋಪಾಲ ಯು ಉಭರಡ್ಕ ರವರು ನೆರವೇರಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜನಾರ್ದನ ಮಾಸ್ಟರ್ ಗಣಿತ ಕೇಂದ್ರ( ರಿ ಸುಳ್ಯ) ಇದರ ಅಧ್ಯಕ್ಷರಾದ ಎಂ ಬಿ ಸದಾಶಿವ ರವರು ವಯಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಗಣಿತ ಸಾಧಕರಿಗೆ ಗಣ್ಯದಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಸುಮಾರು ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರೊಫೆಸರ್ ಶ್ರೀಮತಿ ಸುಭಾಷಿನಿ ಶ್ರೀವತ್ಸ, ಬೆಳ್ಳಾರೆ ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್ ಇದರ ಸಂಚಾಲಕರಾದ ಉಮೇಶ್ ಎಂ ಪಿ, ಕಾಲೇಜು ಪ್ರಾಂಶುಪಾಲರಾದ ಮೋಹನ ಗೌಡ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ, ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯರಾದ ಹಿರಿಯರಾದ ಲಿಂಗಪ್ಪ ಗೌಡ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಮಾತನಾಡಿ ಸಂಘಟಕರ ಶ್ರಮ ಹಾಗೂ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.















ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 19 ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಣಿತ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ 10.30 ರಿಂದ ಅ. 2.30 ರವರೆಗೆ ಪಾತ್ರಾಭಿನಯ, ಗಣಿತ ಹಾಡು, ಬಿರಿಗಾಮಿ, ಲೆಕ್ಕಾಚಾರ ಮಾಡು, ಅಳತೆ ಮಾಡು, ಗಣಿತ ಮಾದರಿ ಮುಖಾಭಿನಯ, ಡ್ಯಾಕುಮೆಂಟರಿ, ರಸಪ್ರಶ್ನೆ, ಗಣಿತ ನೃತ್ಯ ಸೇರಿದಂತೆ ವಿವಿಧ ಗಣಿತ ಸ್ಪರ್ಧೆಗಳು ನಡೆಯಿತು.

ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ
ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೆಂಕಿಲ ಪುತ್ತೂರು
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಬಡಿಗೇರ್ ವಹಿಸಿದ್ದರು.
ಅತಿಥಿಗಳಾಗಿ ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪಿ.ಬಿ. ಸುಧಾಕರ ರೈ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಹಸೈನಾರ್ ಜಯನಗರ, ಸಹ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಪ್ರವೀಣ ಕುಮಾರಿ ಉಪಸ್ಥಿತರಿದ್ದರು.
ಶ್ರೀಮತಿ ಪೂರ್ಣಿಮ ಸಂಯೋಜಕರು ಜನಾರ್ದನ ಮಾಸ್ಟರ್ ಗಣಿತ ಕೇಂದ್ರ (ರಿ.) ಕಾರ್ಯಕ್ರಮ ನಿರೂಪಿಸಿ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು.
ಗಣಿತಕ್ಕೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ಸುಳ್ಯ ಜೂನಿಯರ್ ಕಾಲೇಜು ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳು ಎರಡನೇ ಸ್ಥಾನವನ್ನು ಪಡೆದು ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡರು.
ಶಾಲಾ ಶಿಕ್ಷಕ ವೃಂದದವರು ಹಾಗೂ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಸಹಕರಿಸಿದರು.










