ನ.24ರಂದು ಮಂಡೆಕೋಲಿನಲ್ಲಿ ಪ್ರತಿಭಟನೆ
ಆನೆ ಸಹಿತ ಕಾಡು ಪ್ರಾಣಿಗಳಿಂದ ಕೃಷಿ ನಾಶಕ್ಕೆ ಶಾಶ್ವತ ಪರಿಹಾರ ಸಿಗಬೇಕೆಂದು ಒತ್ತಾಯಿಸಿ ಮಂಡೆಕೋಲು ಗ್ರಾಮ ಪಂಚಾಯತ್ ವಠಾರದಲ್ಲಿ ನ.೨೪ರಂದು ಬೆಳಗ್ಗೆಯಿಂದ ಪ್ರತಿಭಟನೆ ನಡೆಯಲಿದೆ.















ಮಂಡೆಕೋಲು ಗ್ರಾಮ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಕೆಲವು ವರ್ಷಗಳಿಂದ ಆನೆ ಹಾವಳಿಯಿಂದ ಕೃಷಿಕರು ನಲುಗಿ ಹೋಗಿದ್ದಾರೆ. ಏಳೆಂಟು ಆನೆಗಳಿರುವ ಹಿಂಡು ತೋಟಕ್ಕೆ ಇಳಿದರೆ ಫಸಲು ಬಿಟ್ಟಿರುವ ಅಡಿಕೆ ಮರಗಳನ್ನು, ತೆಂಗು, ಬಾಳೆ ಗಿಡಗಳನ್ನು ಪುಡಿಗಟ್ಟಿ ತೋಟವನ್ನು ಛಿದ್ರ ಮಾಡಿ ಹೋಗುತ್ತದೆ. ಇದರಿಂದ ತೀರಾ ನಷ್ಟ ಅನುಭವಿಸಿದ ಕರಷಿಕರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿ, ನೆ ಬಾರದಂತೆ ತಡೆಯಬೇಕೆಂದು ಆಗ್ರಹಿಸಿದ್ದರು. ಮನವಿಗೆ ಸ್ಪಂದನೆ ದೊರೆತಿಲ್ಲ. ಇದೀಗ ಊರವರೆಲ್ಲರೂ ಸೇರಿಕೊಂಡು, ರೈತ ಹಿತರಕ್ಷಣಾ ಸಮಿತಿ ಮಂಡೆಕೋಲು ಸಂಘಟನೆಯನ್ನು ಮಾಡಿಕೊಂಡು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ನ.೨೪ರಂದು ಬೆಳಗ್ಗೆ ಮಂಡೆಕೋಲು ಗ್ರಾಮ ಪಂಚಾಯತ್ ವಠಾರದಲ್ಲಿ ಊರವರೆಲ್ಲರೂ ಸೇರಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಲಿದ್ದಾರೆ. ಸ್ಥಳಕ್ಕೆ ಉನ್ನತ ಮಟ್ಟದ ಅಧಿಕಾರಿಗಳು ಬಂದು ಕೃಷಿಕರ ಅಹವಾಲು ಸ್ವೀಕರಿಸಿ, ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವವರೆಗೆ ನಾವು ಪ್ರತಿಭಟನೆ ಹಿಂಪಡಯದೇ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ರೈತ ಹಿತರಕ್ಷಣಾ ಸಮಿತಿಯ ಶಿವಪ್ರಸಾದ್ ಉಗ್ರಾಣಿಮನೆ, ಸುರೇಶ್ ಕಣೆಮರಡ್ಕ, ಬಾಲಚಂದ್ರ ದೇವರಗುಂಡ ಹಾಗೂ ಗಣೇಶ್ ಮಾವಂಜಿ ತಿಳಿಸಿದ್ದಾರೆ.










