ಡಿ.7ರಂದು ಮಂಡೆಕೋಲಿನಲ್ಲಿ ದಾಸ ಸಂಕೀರ್ತನಾ ಕಾಸರಗೋಡು, ದ.ಕ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ

0

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಅಜ್ಜಾವರ ವಲಯ ಹಾಗೂ ತತ್ವಮಸಿ ಗ್ರೂಪ್ಸ್ ಮಂಡೆಕೋಲು ಇದರ ಆಶ್ರಯದಲ್ಲಿ ದಾಸ ಸಂಕೀರ್ತನಾ ಕಾಸರಗೋಡು ಮತ್ತು ದ.ಕ. ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯು ಡಿಸೆಂಬರ್ 7ರಂದು ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ.
ಬೆಳಗ್ಗೆ ಕುಂಟಾರು ರವೀಶ ತಂತ್ರಿಗಳು ಆಶೀರ್ವಚನ ನೀಡುವರು. ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಕಾರ್ಯಕ್ರಮ ಉದ್ಘಾಟಿಸುವರು. ಮಂಜುನಾತೇಶ್ವರ ಭಜನಾ ಪರಿಷತ್ ಅಜ್ಜಾವರ ವಲಯದ ಅಧ್ಯಕ್ಷ ಪ್ರಕಾಶ ಕಣೆಮರಡ್ಕ ಅಧ್ಯಕ್ಷತೆ ವಹಿಸುವರು. ವೈದ್ಯರಾದ ಅನಂತಪದ್ಮನಾಭ ಭಟ್ ಎರ್ಕಲ್ಪಾಡಿ ಕುಣಿತ ಭಜನೆಯನ್ನು ಉದ್ಘಾಟಿಸುವರು.


ಹಿರಿಯರ ವಿಭಾಗದಲ್ಲಿ ಮೊದಲು ನೋಂದಾಯಿಸಿದ 2೦ ಹಾಗೂ ಕಿರಿಯರ ವಿಭಾಗದಲ್ಲಿ 1೦ ತಂಡಗಳಿಗೆ ಅವಕಾಶ. ಹಿರಿಯ ವಿಭಾಗದಲ್ಲಿ ಪ್ರಥಮ ರೂ. 7025, ದ್ವಿತೀಯ ರೂ.5025, ತೃತೀಯ ರೂ. 3025, ಚತುರ್ಥ ರೂ.1025, ಕಿರಿಯರ ವಿಭಾಗದಲ್ಲಿ ಪ್ರಥಮ ರೂ.3025, ದ್ವಿತೀಯ ರೂ. 2025 ಬಹುಮಾನ ಹಾಗೂ ಶಾಶ್ವತ ಫಲಕ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.