ಸುಳ್ಯ: ಆಹಾರ ಇಲಾಖಾಧಿಕಾರಿಗಳಿಂದ ಮನೆಗಳಿಗೆ ಭೇಟಿ

0

ಬಿಪಿಎಲ್ ಪಡಿತರ ಚೀಟಿಯ ಅರ್ಹತೆ ಬಗ್ಗೆ ಪರಿಶೀಲನೆ

ಸುಳ್ಯ ನಗರ ವ್ಯಾಪ್ತಿಯಲ್ಲಿ ಕೆಲವು ಕುಟುಂಬಗಳ ಬಿಪಿಎಲ್ ಕಾರ್ಡ್ ಪರಿಶೀಲನೆಗೆ ಸೂಚನೆಗಳು ಬಂದಿರುವ ಹಿನ್ನೆಲೆಯಲ್ಲಿ ಅಂತಹವರ ದಾಖಲೆ ಪತ್ರಗಳನ್ನು ಕಚೇರಿಗೆ ತರುವಂತೆ ಮತ್ತು ಅದರ ಅರ್ಹತೆ ದೃಢೀಕರಿಸುವ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು.


ಆದರೆ ಕೆಲವು ಕುಟುಂಬಗಳು ಆಹಾರ ಇಲಾಖೆಗೆ ಹೋಗದೆ ಮಾಹಿತಿ ನೀಡದೆ ಇರುವ ಹಿನ್ನೆಲೆಯಲ್ಲಿ ಅಂಥವರ ಮನೆಗಳಿಗೆ ಅಧಿಕಾರಿಗಳೇ ಕುದ್ದು ಭೇಟಿ ನೀಡಿ ಬಿಪಿಎಲ್ ಕಾರ್ಡಿಗೆ ಹೊಂದಬೇಕಾದ ಅರ್ಹತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.


ಈ ಹಿನ್ನೆಲೆಯಲ್ಲಿ ನ. 26 ರಂದು ಆಹಾರ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ವಸಂತಿ ಹಾಗೂ ಶ್ರೀಮತಿ ಅನಿತಾ ರವರು ಜಯನಗರ ವಾರ್ಡಿನ ಕೆಲವು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಬಿಪಿಎಲ್ ಕಾರ್ಡ್ ಹೊಂದಲು ಬೇಕಾದ ಅರ್ಹತೆಯ ದಾಖಲೆ ಪತ್ರಗಳನ್ನು ಮತ್ತು ಮನೆಯವರ ಆರ್ಥಿಕ ಸ್ಥಿತಿಗಳ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹ ಕಾರ್ಯವನ್ನು ಮಾಡಿದರು.