ನೂತನವಾಗಿ ರಚನೆಗೊಂಡ ಸಹಕಾರ ಭಾರತಿ ಸುಳ್ಯ ತಾಲೂಕು ಸಮಿತಿಯ ಕಾರ್ಯಕಾರಿಣಿ ಸಭೆಯು ಡಿ.1ರಂದು ಸುಳ್ಯ ಸಿ ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು.















ತಾಲೂಕು ಸಮಿತಿಯ ಅಧ್ಯಕ್ಷರಾದ ಡಾ. ಸೋಮಶೇಖರ ಕಟ್ಟೆಮನೆ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಲ್ಲಾ ಸಹಕಾರ ಭಾರತಿಯ ಕೋಶಾಧಿಕಾರಿ ಹಾಗೂ ಸುಳ್ಯದ ಉಸ್ತುವಾರಿಗಳಾದ ಸುಬ್ರಹ್ಮಣ್ಯ ಭಟ್, ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಸುಳ್ಯ ಸಹಕಾರ ಭಾರತಿಯ ನಿಕಟಪೂರ್ವ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪು, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ವಿಮಲಾ ಸೋಮಶೇಖರ ಪೈಕ ರವರು ಸಭೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯ ತಾಲೂಕಿನ ಎಲ್ಲಾ ಪಾಕ್ಸ್ ಗಳ ಅಧ್ಯಕ್ಷ, ಉಪಾಧ್ಯಕ್ಷರುಗಳು, ನಿರ್ದೇಶಕರುಗಳು, ಮಿಲ್ಕ್ ಸೊಸೈಟಿ ಪದಾಧಿಕಾಗಳು, ನಿರ್ದೇಶಕರು, ಸೌಹಾರ್ದ ಸಹಕಾರಿ ಸಂಘಗಳ ಪದಾಧಿಕಾರಿಗಳು ಹಾಗೂ ಲ್ಯಾಂಪ್ ಸೊಸೈಟಿ ನಿರ್ದೇಶಕರುಗಳಿಗೆ ಒಂದು ದಿನದ ತಾಲೂಕು ಮಟ್ಟದ ಅಭ್ಯಾಸವರ್ಗವನ್ನು ಡಿಸೇಂಬರ್ 2025 ರ 30 ನೇ ತಾರೀಕಿನೊಳಗೆ ರೊಳಗೆ ನಡೆಸಲು ತೀರ್ಮಾನಿಸಲಾಯಿತು.
ಅಭ್ಯಾಸವರ್ಗಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕ್ಯಾಂಪ್ಕೋ ಮಾಜಿ ಅಧ್ಯಕ್ಷರಾದ ಎಸ್ ಆರ್ ಸತೀಶ್ಚಂದ್ರ,ಅಥವಾ ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಾಣೂರು ನರಸಿಂಹ ಕಾಮತ್ ಹಾಗೂ ಶ್ರೀಮತಿ ವಿದ್ಯಾ ಪೈ (ಮಹಿಳಾಪ್ರಮುಕ್ ರಾಜ್ಯ ಸಹಕಾರ ಭಾರತಿ )ಇವರನ್ನು ಕೇಳಿಕೊಳ್ಳುವುದಾಗಿ ತೀರ್ಮಾನಿಸಲಾಯಿತು.
ಸುಳ್ಯ ತಾಲೂಕಿನ ಎಲ್ಲಾ ಪಾಕ್ಸ್ ಗಳ, ಹಾಲು ಸೊಸೈಟಿ, ಸೌಹಾರ್ದ ಸಹಕಾರಿ ಹಾಗೂ ಲ್ಯಾಂಪ್ ಸೊಸೈಟಿ ಗಳ ನಿರ್ದೇಶಕರುಗಳನ್ನು ಸಹಕಾರ ಭಾರತಿ ವಾಟ್ಸಪ್ಪ ಗ್ರೂಪ್ ಗೆ ಸೇರಿಸಿಕೊಂಡು ಸಂಘಟನೆಯನ್ನು ವಿಸ್ತಾರಗೋಳಿಸಲು ತೀರ್ಮಾಸನಿಸಲಾಯಿತು. ಸಹಕಾರ ಭಾರತಿ ಸುಳ್ಯ ತಾಲೂಕು ಪ್ರದಾನ ಕಾರ್ಯದರ್ಶಿ ಕರುಣಾಕರ ಹಾಸ್ಪಾರೆಯವರು ಸ್ವಾಗತಿಸಿ, ಅಧ್ಯಕ್ಷರಾದ ಡಾ. ಸೋಮಶೇಖರ ಕಟ್ಟೆಮನೆಯವರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಹಕಾರ ಭಾರತಿ ಉಪಾಧ್ಯಕ್ಷರಾದ, ಶ್ರೀಮತಿ ಶರ್ಮಿಳಾ ಕಟ್ಟೆಮನೆ, ಕಾರ್ಯದರ್ಶಿಗಳಾದ ಡಾ. ಲಕ್ಷ್ಮೀಶ್ ಕಲ್ಲುಮುಟ್ಲು, ಚಂದ್ರಶೇಖರ ಸುಳ್ಯ, ಶ್ರೀಮತಿ ಭಾರತಿ ಕೆ ಪಿ, ಮಹಿಳಾ ಸಹಪ್ರಮುಖ್ ಶೀಮತಿ ಶಕುಂತಳ ಕೇವಳ, ಸದಸ್ಯರುಗಳಾದ ಜಯಪ್ರಕಾಶ್ ಮೊಗ್ರ, ಗಣಪತಿ ಭಟ್ ಗೂನಡ್ಕ, ಶ್ರೀ ವಸಂತ ನಡುಬೈಲು ಶ್ರೀಮತಿ ಮೂಕಾಂಬಿಕಾ ಭೀಮಗುಳಿ ಉಪಸ್ಥಿತರಿದ್ದರು.ತಾಲೂಕು ಮಹಿಳಾ ಪ್ರಮುಖ್ ಶ್ರೀಮತಿ ಭಾರತಿ ಪುರುಷೋತಮ್ ಉಳುವಾರು ರವರು ವಂದಿಸಿದರು.










