ಉಪಾಧ್ಯಕ್ಷರಾಗಿ ಲಿಜೋ ಜೋಸ್ ಆಯ್ಕೆ
ಸುಳ್ಯ ಕ್ರೈಸ್ತ ಅಲ್ಪಸಂಖ್ಯಾತರ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಹಿರಿಯರಾದ ವಿಲಿಯಂ ಲಸ್ರಾದೋ, ಉಪಾಧ್ಯಕ್ಷರಾಗಿ ಲಿಜೋ ಜೋಸ್ ಗುತ್ತಿಗಾರು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ.1ರಂದು ಅಧ್ಯಕ್ಷ – ಉಪಾಧ್ಯಕ್ಷ ರ ಆಯ್ಕೆಗೆ ದಿನ ನಿಗದಿಯಾಗಿತ್ತು. ಅಧ್ಯಕ್ಷತೆಗೆ ವಿಲಿಯಂ ಲಸ್ರಾದೋ ರವರ ಹೆಸರನ್ನು ನಿರ್ದೇಶಕಿ ಸುನಿತಾ ಮೊಂತೆರೋ ಸೂಚಿಸಿದರೆ, ನಿರ್ದೇಶಕ ಕೆ.ಎಂ.ಜಾರ್ಜ್ ಅನುಮೋದನೆ ಮಾಡಿದರು. ಉಪಾಧ್ಯಕ್ಷತೆಗೆ ಲಿಜೋ ಜೋಸ್ ರವರ ಹೆಸರನ್ನು ನಿರ್ದೇಶಕಿ ಮಿನಿಮೋಳ್ ಸೂಚಿಸಿದರೆ, ನಿರ್ದೇಶಕ ಈ.ಪಿ. ರಾಜು ಕ್ಸೇವಿಯರ್ ಅನುಮೋದನೆ ಮಾಡಿದರು.

ಸಹಕಾರ ಸಂಘದ 11 ಸಂಘಕ್ಕೆ ನಿರ್ದೆಶಕರ ಅವಿರೋಧ ಆಯ್ಕೆ ನಡೆದಿತ್ತು. ಚುನಾವಣಾ ಪ್ರಕ್ರಿಯೆಯನ್ನು ಸಹಕಾರ ಸಂಘದ ಅಧಿಕಾರಿ ಶಿವಲಿಂಗಯ್ಯ ನಡೆಸಿಕೊಟ್ಟರು.















ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆ ಸಂದರ್ಭದಲ್ಲಿ ನಿರ್ದೇಶಕರುಗಳಾದ ಉದಯ ಮೊಂತೆರೋ, ಸುಜೊ ಜೋನ್, ಡೇವಿಡ್ ಧೀರ ಕ್ರಾಸ್ತ, ಮೈಕಲ್ ಪ್ರಾನ್ಸಿಸ್, ಓವಿನ್ ಪಿಂಟೋ, ಸಂಘದ ಮಾಜಿ ಅಧ್ಯಕ್ಷ ಬಿಟ್ಟಿ ಬಿ. ನೆಡುನಿಲಂ ಇದ್ದರು.
ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಹಕಾರಿ ವಿಲಿಂ ಲಸ್ರಾದೋ ರವರು ಸುಳ್ಯದಲ್ಲಿ ಕ್ರೈಸ್ತ ಅಲ್ಪಸಂಖ್ಯಾತ ಸಹಕಾರ ಸಂಘ ಆರಂಭಕ್ಕೆ ಶ್ರಮಿಸಿದವರು. ಆರಂಭದಿಂದಲೇ ನಿರ್ದೇಶಕರಾಗಿ, ಮೂರು ಅವಧಿಯಲ್ಲಿಯೂ ಸೊಸೈಟಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸುಳ್ಯ ಲಯನ್ಸ್ ಕ್ಲಬ್ ನ ಸ್ಥಾಪಕ ಸದಸ್ಯರಾಗಿರುವ ಇವರು ಸುಳ್ಯ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ.
ಉಪಾಧ್ಯಕ್ಷರಾಗಿ ಆಯ್ಕೆಯಾದ ಲಿಜೋ ಜೋಸ್ ಉದ್ಯಮಿಯಾಗಿದ್ದಾರೆ. ಸಂಘದಲ್ಲಿ ಮೂರನೇ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸುಳ್ಯ ಟಿಎಪಿಸಿಎಂಎಸ್ ಇದರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.










