ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡುತಿದ್ದಾರೆಂದು ಆರೋಗ್ಯ ರಕ್ಷಾ ಸಮಿತಿಯಿಂದ ಡಾ.‌ಶಾಲಿನಿಯವರಿಗೆ ಗೌರವ

0

ಸುಳ್ಯ ತಾಲೂಕು ಆಸ್ಪತ್ರೆಯ ಸ್ತ್ರೀರೋಗ ತಜ್ಞರಾಗಿರುವ ಡಾ.ಶಾಲಿನಿಯವರು ಅತ್ಯುತ್ತಮ ಸೇವೆ ನೀಡುತಿದ್ದಾರೆಂಬ ಕಾರಣಕ್ಕೆ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯವರು ಡಿ. 2ರಂದು ಗೌರವಿಸಿದರು.
ಕಳೆದ ತಿಂಗಳು 60ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ. 25 ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಡಾ. ಶಾಲಿನಿಯವರು ಮಾಡಿದ್ದಾರೆ. ಇವರ ಈ ಸೇವೆಗಾಗಿ ಅವರನ್ನು ಗೌರವಿಸಲಾಗಿದೆ ಎಂದು ರಕ್ಷಾ ಸಮಿತಿಯ ಶಹೀದ್ ಪಾರೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರುಗಳಾದ ರಾಧಾಕೃಷ್ಣ ಪರಿವಾರಕಾನ, ಚಂದ್ರನ್ ಕೂಟೇಲು, ಅಚ್ಚು ಪ್ರಗತಿ, ಆಸ್ಪತ್ರೆ ಸಿಬ್ಬಂದಿ ಲೀಲಾಧರ್ ಮೊದಲಾದವರು ಉಪಸ್ಥಿತರಿದ್ದರು.