ಸೋಣಂಗೇರಿ ಮುಖ್ಯರಸ್ತೆಯ ಹೊಂಡಕ್ಕೆ ಡಾಮರೀಕರಣ – ಸಾರ್ವಜನಿಕರ ಮೆಚ್ಚುಗೆ















ಸುಳ್ಯ ಸುಬ್ರಹ್ಮಣ್ಯ ರಸ್ತೆಯ ಸೋಣಂಗೇರಿ ಸಮೀಪ ಮುಖ್ಯ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ ಎಂಬ ವರದಿ ಸುದ್ದಿ ಪತ್ರಿಕೆ ಹಾಗೂ ಸುದ್ದಿ ವೆಬ್ ಸೈಟ್ ನಲ್ಲಿ ಪ್ರಕಟವಾಗಿತ್ತು.
ಇದನ್ನು ಗಮನಿಸಿದ ಇಲಾಖೆ ಡಿ.01 ರಂದು ರಸ್ತೆಯಲ್ಲಿರುವ ಗುಂಡಿಗಳನ್ನು ಡಾಮರೀಕರಣ ಮಾಡಿ ಮುಚ್ಚಿದರು.
ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪೈಚಾರಿನಿಂದ ಸೋಣಂಗೇರಿವರೆಗೆ ರಸ್ತೆ ಅಗಲೀಕರಣವಾಗಿ ಡಾಮರೀಕರಣ ಕೆಲ ಸಮಯದ ಹಿಂದೆ ನಡೆದಿದ್ದು ಈಗ ಅಲ್ಲಲ್ಲಿ ಹೊಂಡ ನಿರ್ಮಾಣವಾಗಿದೆ.
ಸೋಣಂಗೇರಿ ಸಮೀಪ ರಸ್ತೆ ಮಧ್ಯದಲ್ಲಿ ಡಾಮರು ಜಲ್ಲಿ ಎದ್ದು ಹೋಗಿ ಎರಡು ಕಡೆ ದೊಡ್ಡ ಗುಂಡಿಗಳು ನಿರ್ಮಾಣವಾಗಿದೆ.
ವಾಹನ ಸವಾರರು ಈ ಗುಂಡಿಗಳನ್ನು ತಪ್ಪಿಸಿಕೊಂಡು ಹೋಗುವಾಗ ಎದುರಿನಿಂದ ಬರುವ ವಾಹನಕ್ಕೆ ಡಿಕ್ಕಿ ಹೊಡೆಯುವ ಸಂಭವ ಕೂಡ ಎದುರಾಗಬಹುದು ಎಂದು ವರದಿ ಪ್ರಕಟಗೊಂಡಿತ್ತು.










