ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಗೀತಾಜಯಂತಿ ಆಚರಣೆ ಮತ್ತು ಆಶ್ರಮದ ಸ್ವಾಮಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 231 ಕೃತಿ ಮಾಲೆ ಮಾತಸ್ತು ಸಕಲ ಜಗತ: ಬಿಡುಗಡೆ ಕಾರ್ಯಕ್ರಮ ನ. 30 ರಂದು ನಡೆಯಿತು.
ಆಶ್ರಮದ ಟ್ರಸ್ಟಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಸುಳ್ಯ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಹರ್ಷವರ್ಧನ ಪುಸ್ತಕ ಬಿಡುಗಡೆಗೊಳಿಸಿದರು.















ಸ್ವಾಮಿಜಿಯವರು ಭಗವದ್ಗೀತೆಯ ಮಹತ್ವವನ್ನು ತಿಳಿಸಿ ಮಾತನಾಡಿದರು.
ವೇದಿಕೆಯಲ್ಲಿ ಕೃಷಿಕರಾದ ಚಿನ್ನಪ್ಪ ಗೌಡ ನಾರಲು,ಲೋಕೇಶ ಅಡ್ಡಂತ್ತಡ್ಕ,ಚಿತ್ರಕುಮಾರ ಮುಡೂರು,ಆಶ್ರಮದ ಟ್ರಸ್ಟಿ ಪ್ರಣವಿ ,ನಿವೃತ್ತ ಎ.ಎಸ್.ಐ ಕುಶಾಲಪ್ಪ ಗೌಡ ಅತ್ಯಾಡಿ ಉಪಸ್ಥಿತರಿದ್ದರು.










