ಮೊಗರ್ಪಣೆಯಲ್ಲಿ ಎಸ್ ಬಿ ಎಸ್ ತಾಜುಲ್ ಉಲಮಾ ಅನುಸ್ಮರಣೆ : ಪ್ರಚಾರ ಪತ್ರ ಬಿಡುಗಡೆ

0

ಮೊಗರ್ಪಣೆ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸಾ ಎಸ್ ಬಿ ಎಸ್( ಸುನ್ನಿ ಬಾಲಸಂಘ) ವಿದ್ಯಾರ್ಥಿಗಳಿಂದ ವರ್ಷಂ ಪ್ರತಿ ಆಚರಿಸಿಕೊಂಡು ಬರುವ ತಾಜುಲ್ ಉಲಮಾ ಹಾಗೂ ನೂರುಲ್ ಉಲಮಾ ಮತ್ತು ಅಗಲಿದ ಗಣ್ಯ ನೇತಾರರ ಅನುಷ್ಮರಣೆ ಕಾರ್ಯಕ್ರಮ ಡಿ. 13 ಹಾಗೂ 14ರಂದು ಮೊಗರ್ಪಣೆ ಮಸೀದಿ ವಠಾರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಪ್ರಚಾರ ಪತ್ರ ಡಿ 2 ರಂದು ನೂರುಲ್ ಇಸ್ಲಾಂ ಮದರಸ ವಠಾರದಲ್ಲಿ ನಡೆಯಿತು.ಮದರಸದ ಎಸ್‌ಬಿಎಸ್ ವಿದ್ಯಾರ್ಥಿಗಳು ಪ್ರಚಾರ ಪತ್ರವನ್ನು ಬಿಡುಗಡೆಗೊಳಿಸಿದರು.

ಜಮಾಅತ್ ಕಮಿಟಿಯ ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಜಯನಗರ ಕಮಿಟಿ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ಲಾ ಜಯನಗರ, ಮದರಸ ಸದರ ಮುಅಲ್ಲಿಂ ಅಬ್ದುಲ್ ಕರೀಂ ಸಕಾಫಿ, ಮೊಅಲ್ಲಿಮರುಗಳಾದ ಹಂಝ ಸಖಾಫಿ, ಅಬ್ದುನ್ನಾಸರ್ ಸಖಾಫಿ, ಅಬೂಬಕ್ಕರ್ ಸಿದ್ದೀಕ್ ನಹೀಮಿ,ಯೂಸುಫ್ ಮದನಿ,ಸ್ವಾಗತ ಸಮಿತಿ ಸದಸ್ಯ ಹಸೈನಾರ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.