ಪಿಟಿಸಿಎ ಟ್ರೋಫಿ ಚೆಸ್ ಸ್ಪರ್ಧೆ ಮತ್ತು ಆರ್ ಸಿ ಸಿ ಅಂತರಾಷ್ಟ್ರೀಯ ಫಿಡೆ ರೇಟೆಡ್ ರಾಪಿಡ್ ಕಪ್ ಸ್ಪರ್ಧೆಯಲ್ಲಿ ಕೆವಿಜಿ ಐಪಿಎಸ್ ನ ವಿದ್ಯಾರ್ಥಿನಿಯ ಸಾಧನೆ

0

ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ (ಆರ್) ವತಿಯಿಂದ ಆಯೋಜಿಸಿದ ಪಿ ಟಿ ಸಿ ಎ ಟ್ರೋಫಿ ಓಪನ್ ರಾಪಿಡ್ ಚೆಸ್ ಸ್ಪರ್ಧೆಯಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಯು ಕೆ ಜಿ ಯ ವಿದ್ಯಾರ್ಥಿನಿ ಲಹರಿ. ರಾವ್ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಈ ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಹಲವು ಆಟಗಾರರು ಭಾಗವಹಿಸಿದ್ದು ವೇಗ, ನಿಖರತೆ, ತಾರ್ಕಿಕ ಹಾಗೂ ಕ್ರೀಡಾ ಮನೋಭಾವಕ್ಕೆ ಉತ್ತಮ ಅವಕಾಶ ಒದಗಿತು. ಲಹರಿ ರಾವ್ ಅವರು ತಮ್ಮ ತಂತ್ರ ಬದ್ದ ಆಟ ಮತ್ತು ಸಮಾಧಾನ ಚಿಂತನೆಯ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಅದೇ ರೀತಿ ನ. 30ರಂದು ಮಂಗಳೂರಿನಲ್ಲಿ 28ನೇ ಆರ್ ಸಿ ಸಿ ಅಂತರಾಷ್ಟ್ರೀಯ ಫಿಡೆ ರೇಟೆಡ್ ರಾಪಿಡ್ ಕಪ್ ಆಯೋಜಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಉತ್ತಮ ಆಟದ ಮೂಲಕ ಎಲ್ಲರ ಗಮನ ಸೆಳೆದು ಕಿರಿಯ ವಯಸ್ಸಿನಲ್ಲಿಯೇ ಉತ್ತಮ ಆಟ ಪ್ರದರ್ಶಿಸಿದ್ದಕ್ಕಾಗಿ ‘ ಯಂಗೆಸ್ಟ್ ಪ್ಲೇಯರ್ ‘ ಎಂಬ ಗೌರವಾನ್ವಿತ ಬಿರುದಿಗೂ ಪಾತ್ರರಾಗಿದ್ದಾರೆ.

ಇವರಿಗೆ ಸುಳ್ಯದ ಚೆಸ್ ತರಬೇತುದಾರ ಹರಿಪ್ರಸಾದ್ ಕೊಯಿಂಗಾಜೆ ಮಾರ್ಗದರ್ಶನವನ್ನು ಮಾಡಿರುತ್ತಾರೆ ಮತ್ತು ತರಬೇತಿ ಪಡೆಯುತ್ತಿದ್ದಾಳೆ.
ಇವರು ಅರಂತೋಡಿನ ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿರುವ ರಾಜಾರಾಮ್ ಮತ್ತು ಕೆವಿಜಿ ಐಪಿಎಸ್ ನ ಶಿಕ್ಷಕಿ ಶ್ರೀಮತಿ ಸೌಮ್ಯ ಕೆ ಇವರ ಪುತ್ರಿಯಾಗಿರುತ್ತಾರೆ. ಇವರಿಗೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ, ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಅಭಿನಂದನೆ ಸಲ್ಲಿಸಿದರು.