ಕೊಲ್ಲಮೊಗ್ರು ಬಂಗ್ಲೆಗುಡ್ಡೆ ಶಾಲೆಯಲ್ಲಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ ಇದ್ದರೂ ಬಿಸಿಯೂಟ ವ್ಯವಸ್ಥೆ ಇದೆ: ಶಾಲಾಭಿವೃದ್ದಿ ಸಮಿತಿ

0

ತಾಲೂಕಿನಾದ್ಯಂತ ಬಿಸಿಯೂಟ ನೌಕರ ಪ್ರತಿಭಟನೆ ನಡೆಯುತಿದ್ದರೂ ಕೊಲ್ಲಮೊಗ್ರು ಬಂಗ್ಲೆಗುಡ್ಡೆಯ ಶಾಲೆಯ ಎಸ್.ಡಿ.ಎಂ.ಸಿ ಬಿಸಿಯೂಟ ವ್ಯವಸ್ಥೆ ಮಾಡುವುದಾಗಿ ಶಾಲಾಭಿವೃದ್ದಿ ಸಮಿತಿ ತಿಳಿಸಿದೆ.

ಬಿಸಿಯೂಟ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಬುತ್ತಿ ತರುವಂತೆ ನಿರ್ಧಾರ ಮಾಡಿದ್ದರೂ ಈ ನಿರ್ಧಾರದಿಂದ ಹಿಂದೆ ಸರಿದ ಶಾಲಾಭಿವೃದ್ದಿ ಸಮಿತಿ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಪೋಷಕರೇ ಮಾಡುವುದಾಗಿ ಕೊಲ್ಲಮೊಗ್ರು ಗ್ರಾ.ಪಂ ಸದಸ್ಯ ಬಾಲಸುಬ್ರಹ್ಮಣ್ಯ ಭಟ್, ಎಸ್.ಡಿ.ಎಂ.ಸಿ ಸದಸ್ಯ ಹರ್ಷ ಅಡ್ನೂರು ಮಜಲು ತಿಳಿಸಿದ್ದಾರೆ.