ಕುರುಂಜಿ ಭಾಗ್: ರಸ್ತೆ ಬದಿಯ ಮರಕ್ಕೆ ಸಿಡಿಲು ಬಡಿತ

0

ರಸ್ತೆಯಲ್ಲಿ ಜನ ಸಂಚಾರ ಇಲ್ಲದ ಕಾರಣ ತಪ್ಪಿದ ಅನಾಹುತ

ಇಂದು ಸಂಜೆ ಸುರಿದ ಭಾರಿ ಮಳೆಯ ಸಂದರ್ಭ ಉಂಟಾದ ಸಿಡಿಲ ಅಘಾತದಿಂದ ಸುಳ್ಯ ತಾಲೂಕು ಕಚೇರಿ ಬಳಿ ರಸ್ತೆ ಬದಿಯ ಮರಕ್ಕೆ ಸಿಡಿಲು ಬಡಿದು ಮರ ಹಾನಿ ಗೊಂಡಿದೆ.

ಈ ಸಂದರ್ಭದಲ್ಲಿ ರಸ್ತೆಯಲ್ಲಿ ಜನ ಮತ್ತು ವಾಹನ ಸಂಚಾರ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದಂತೆ ಆಗಿದೆ. ಸಿಡಿಲು ಬಡಿದ ಘಟನೆಯನ್ನು ಸ್ಥಳೀಯರು ಮೊಬೈಲ್ ನಲ್ಲಿ ಕ್ಲಿಕ್ಕಿಸಿ ಜಾಲತಾಣದಲ್ಲಿ ಅರಿಬಿಟ್ಟಿದ್ದಾರೆ.