ಕೊಡಗು ವಿದ್ಯಾಲಯದಲ್ಲಿ ಡಿ. 2ರಂದು ಬ್ರಹ್ಮಗಿರಿ ಸಹೋದಯ ಒಕ್ಕೂಟದ ವತಿಯಿಂದ ಆಯೋಜಿಸಲಾದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ತಮ್ಮ ಅದ್ಭುತ ಕ್ರೀಡಾ ಪ್ರತಿಭೆಯನ್ನು ತೋರಿಸಿ ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

ಈ ಕ್ರೀಡಾಕೂಟದಲ್ಲಿ 4 ಮತ್ತು 5ನೇ ತರಗತಿಯ 4×100 ಮೀ. ರಿಲೇ ಸ್ಪರ್ಧೆಯಲ್ಲಿ ನಿಧಾ ಫಾತಿಮಾ, ಜನೀಷ, ಕ್ಷಮಾ ಮತ್ತು ಝಯಿಮ ಫಾತಿಮಾ ಇವರ ತಂಡ ಪ್ರಥಮ ಸ್ಥಾನ ಗಳಿಸಿತು.
ಅದೇ ವಿಭಾಗದ ಬಾಲಕರ 4×100 ಮೀ. ರಿಲೇ ಸ್ಪರ್ಧೆಯಲ್ಲಿ ಮೊಹಮ್ಮದ್ ದಿಹಾನ್, ಪೂರ್ವಿಕ್, ವೇದಸ್ ಮತ್ತು ಜಾಹಿದ್ ಇವರ ತಂಡ ಮೂರನೇ ಸ್ಥಾನ ಗಳಿಸಿತು.
ಪ್ರಾಥಮಿಕ ವಿಭಾಗದ 4×100 ಮೀ. ರಿಲೇ ಸ್ಪರ್ಧೆಯಲ್ಲಿ ಅಪರ್ಣಾ, ತ್ರೈಬಾ ಫಾತಿಮಾ, ಸಮೀಕ್ಷಾ ಮತ್ತು ತನಿಷ್ಕಾ ಇವರ ತಂಡ ದ್ವಿತೀಯ ಸ್ಥಾನ ಪಡೆಯಿತು.















ವೈಯಕ್ತಿಕ ಕ್ರೀಡಾ ಸ್ಪರ್ಧೆಗಳಲ್ಲಿಯೂ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಆರನೇ ತರಗತಿಯ ಅಪರ್ಣ ಲಾಂಗ್ ಜಂಪ್ನಲ್ಲಿ ಪ್ರಥಮ ಸ್ಥಾನ ಮತ್ತು 100 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಪ್ರಾಥಮಿಕ ವಿಭಾಗದಲ್ಲಿ ತ್ತೈಬಾ ಫಾತಿಮಾ 100 ಮೀ. ಓಟದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
4 ಮತ್ತು 5ನೇ ತರಗತಿಯ ವಿಭಾಗದಲ್ಲಿ ನಿಧಾ ಫಾತಿಮಾ 100 ಮೀ. ಓಟದಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ.
ಅದೇ ವಿಭಾಗದ ಮೊಹಮ್ಮದ್ ದಿಹಾನ್ ಓಟ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದು ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಶಾಲಾ ದೈಹಿಕ ಶಿಕ್ಷಕರಾದ ಪ್ರಶಾಂತ್ ಮತ್ತು ಶ್ರೀಮತಿ ಆಶಾ ಜ್ಯೋತಿ ಮಾರ್ಗದರ್ಶನವನ್ನು ನೀಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ, ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರು,ಪೋಷಕರು ಅಭಿನಂದಿಸಿ, ಶುಭಾಶಯ ಕೋರಿದ್ದಾರೆ.










