ಗುರುಂಪು : ಬಾಲಕ ಮಹಮ್ಮದ್ ಆದಿಲ್ ನಿಧನ

0

ಸುಳ್ಯದ ಗಾಂಧಿನಗರ ಜುಮಾ ಮಸೀದಿಯ ಜಮಾಅತ್ತಿಗೊಳಪಟ್ಟ ಗುರಂಪು ನಿವಾಸಿ ಮುಸ್ತಫಾ ರವರ 13 ವರ್ಷದ ವಿಶೇಷ ಚೇತನ ಮಗು ಮಹಮ್ಮದ್ ಆದಿಲ್ ಡಿ 3 ರಂದು ಗುರುಂಪು ಅವರ ಮನೆಯಲ್ಲಿ ನಿಧನರಾದರು.

ಹುಟ್ಟಿನಿಂದಲೇ ಅನಾರೋಗ್ಯಕ್ಕೀಡಾಗಿದ್ದ ಈ ಮಗು ಸಂಪೂರ್ಣ 13 ವರ್ಷಗಳ ಕಾಲ ಮಲಗಿದ ಸ್ಥಿತಿಯಲ್ಲೇ ಇದ್ದರು. ಮಗುವಿನ ಪೋಷಕರು ಕಳೆದ 13 ವರ್ಷಗಳಿಂದ ಮಗುವಿನ ಆರೋಗ್ಯಕ್ಕಾಗಿ ನಾನಾ ರೀತಿಯ ಪರಿಶ್ರಮವನ್ನು ಪಟ್ಟಿದ್ದಾರೆ.

ಮೃತ ಬಾಲಕ ತಂದೆ ಮುಸ್ತಫಾ, ತಾಯಿ ಅಸೀನಾ ಹಾಗೂ ಇಬ್ಬರು ಕಿರಿಯ ಸಹೋದರರು ಮತ್ತು ಬಂದು ಮಿತ್ರರನ್ನು ಅಗಲಿದ್ದಾರೆ.