
ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಬರುವ ನಿರ್ಗತಿಕರ ಮಾಸಾಶನ ಮಂಜುರಾತಿ ಪತ್ರವನ್ನು ಡಿ.2 ರಂದು ಕೊಲ್ಲಮೊಗ್ರು ಕಾರ್ಯಕ್ಷೇತ್ರದ ಗಿರಿಜಾ ಇವರಿಗೆ ಹಸ್ತಾಂತರ ಮಾಡಲಾಯಿತು. ಫಲಾನಿಭಬಿಗೆ ವೀಲ್ ಚೇರ್, ಮಲಗಿದ್ದ ಸ್ಥಿತಿಯಲ್ಲಿದ್ದವರಿಗೆ ವಾಟರ್ ಬೆಡ್ ವಿತರಿಸಲಾಯಿತು.















ಈ ಸಂದರ್ಭದಲ್ಲಿ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳ ವಲಯ ಅಧ್ಯಕ್ಷರಾದ ತೀರ್ಥರಾಮ ಧೋಣಿಪಳ್ಳ. ಜನಜಾಗೃತಿ ವಲಯದ ಅಧ್ಯಕ್ಷರಾದ ಮಾಧವ ಚಾಂತಲಾ, ಭಜನಾ ಪರಿಷತ್ತಿನ ವಲಯ ಅಧ್ಯಕ್ಷರಾದ ಚಂದ್ರಶೇಖರ ಕೊಂದಾಳ, . ಕೊಚ್ಚಿಲ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕಟ್ಟ ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶೇಖರ್ ಅಂಬೆಕಲ್ಲು,
ತಾಲೂಕಿನ ಸಮನ್ವಯಧಿಕಾರಿ ಲಕ್ಷ್ಮೀ,
ಭಜನಾ ಪರಿಷತ್ತಿನ ಕೋಶಾಧಿಕಾರಿಯಾದ ಗಾಯತ್ರಿ ಬಾಲಸುಬ್ರಮಣ್ಯ ಭಟ್, ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ, ನವ ಜೀವನ ಸದಸ್ಯರಾದ ರಘುರಾಮ್ ಪಾಟಾಳಿ ಮತ್ತು ಕೊಲ್ಲಮೊಗ್ರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸಾವಿತ್ರಿ ಯವರು ಉಪಸ್ಥಿತರಿದ್ದರು.










