ಇಂದು(ಡಿ.4) ಸಂಜೆ ವಿವಿಧ ವೈಧಿಕ ಕಾರ್ಯಗಳು
ನಾಳೆ (ಡಿ.5) ಮೂಲಸ್ಥಾನದಲ್ಲಿ ಶ್ರೀ ಕಾಚುಕುಜುಂಬ ದೈವದ ಪುನಃ ಪ್ರತಿಷ್ಠೆ
ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಪಂಬೆತ್ತಾಡಿ ಗ್ರಾಮದ ಗರಡಿಬೈಲಿನಲ್ಲಿ
ಶ್ರೀ ಕಾಚುಕುಜುಂಬ ದೈವದ ದೈವಸ್ಥಾನ ಪುನ: ನಿರ್ಮಾಣ ಗೊಂಡು
ಪುನಃ ಪ್ರತಿಷ್ಠಾ ಕಲಶ ಪ್ರಯುಕ್ತ ಡಿ. 03 ಮತ್ತು 04 ರಂದು ವಿವಿಧ ವೈಧಿಕ ಧಾರ್ಮಿಕ ಕಾರ್ಯಕ್ರಮಗಳು ಬ್ರಹ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದು.ಡಿ. 05 ರಂದು 10: 29ರಿಂದ 11:30ರ ತನಕ ನಡೆಯುವ ಮಕರ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಕಾಚುಕುಜುಂಬ ದೈವದ ಪುನಃ ಪ್ರತಿಷ್ಠೆ ನಡೆಯಲಿದೆ.
















ಡಿ.04 ರಂದು ಸಂಜೆ ಗಂಟೆ 5:30ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಡಿ. 05ರಂದು ಪೂರ್ವಾಹ್ನ ಗಂಟೆ 7:30ರಿಂದ ಮಹಾಗಣಪತಿ ಹೋಮ, ಕಲಶ ಪೂಜೆ ದಿವಾ ಗಂಟೆ 10:29ರಿಂದ 11:30ರ ತನಕ ನಡೆಯುವ ಮಕರ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಕಾಚುಕುಜುಂಬ ದೈವದ ಪುನಃ ಪ್ರತಿಷ್ಠಾ ಕಲಶಾಭಿಷೇಕ ತಂಬಿಲ ಸೇವೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ಡಿ.3 ರಂದು ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ಮಹಾಗಣಪತಿ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ, , ಪ್ರಸಾದ ವಿತರಣೆ, ಅನ್ನಸಂತರ್ಪಣೆ , ಸಂಜೆ ದುರ್ಗಾಪೂಜೆ, ಸುದರ್ಶನ ಹೋಮ, ಅಘೋರ ಹೋಮ, ವನದುರ್ಗಾ ಹೋಮ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ಕಾಚು ಕುಜುಂಬ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪರಮೇಶ್ವರ ಬಿಳಿಮಲೆ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.













