














ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಉದ್ದಂಪಾಡಿ ರಾಮಣ್ಣ ನಾಯ್ಕರವರು ಡಿ.04 ರಂದು ಮುಂಜಾನೆ ನಿಧನರಾದರು.
ಅವರಿಗೆ 88 ವರ್ಷ ಪ್ರಾಯವಾಗಿತ್ತು.
ಕಾಂಗ್ರೆಸ್ ಪಕ್ಷದ ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ಇವರು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ,ಗ್ರಾಮ ಪಂಚಾಯತ್ ಸದಸ್ಯರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯಯರಾಗಿದ್ದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ಶ್ರೀಮತಿ ಸರಸ್ವತಿ,ಪುತ್ರರಾದ ಕರುಣಾಕರ ಉದ್ದಂಪಾಡಿ,ಕೇಶವ ಉದ್ದಂಪಾಡಿ,ಸುಳ್ಯ ಕೆ.ವಿ.ಜಿ.ಐ.ಟಿ.ಐ ಉದ್ಯೋಗಿ ಜಗದೀಶ ಉದ್ದಂಪಾಡಿ,ಚಿದಾನಂದ ಉದ್ದಂಪಾಡಿ ಪುತ್ರಿ ಶ್ರೀಮತಿ ಚಂದ್ರಕಲಾ ಸದಾಶಿವ ಬಿಳಿನೆಲೆ ,ಸೊಸೆಯಂದಿರು,ಅಳಿಯ ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.










