ತೊಡಿಕಾನ ಗ್ರಾಮ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನೂರಾರು ಹೆರಿಗೆ ಮಾಡಿಸಿ, ನಾಟಿವೈದ್ಯರಾಗಿಯೂ ಜನಮನ್ನಣೆ ಗಳಿಸಿದ್ದ ಶತಾಯುಷಿ, ತೊಡಿಕಾನ ಗ್ರಾಮದ ಗುಂಡಿಗದ್ದೆ ನಿವಾಸಿ ದಿ. ಬೊಳ್ಳೂರು ನಾಗಪ್ಪ ಗೌಡರ ಪತ್ನಿ ಪುಟ್ಟಮ್ಮ ಬೊಳ್ಳೂರು ನ. 30 ರಂದು ನಿಧನರಾದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.
















ವೈದ್ಯರಿಲ್ಲದ ಕಾಲದಲ್ಲಿ ತೊಡಿ ಕಾನ ಗ್ರಾಮದ ಸುತ್ತಮುತ್ತ ಮನೆ ಮನೆಗೆ ತೆರಳಿ ನೂರಾರು ಮಂದಿಗೆ ಹೆರಿಗೆ ಮಾಡಿಸಿ, ತಾಯಿ ಮಗುವಿಗೆ ಹಳ್ಳಿ ಮದ್ದು ಕೊಟ್ಟು ಬರುತ್ತಿದ್ದರು. ತಮ್ಮ ಜೀವನದ ಕೊನೆಯ ದಿನಗಳವರೆಗೂ ಹತ್ತಾರು ಬಗೆಯ ಖಾಯಿಲೆಗಳಿಗೆ ಹಳ್ಳಿಮದ್ದು ನೀಡಿ ಗ್ರಾಮದಲ್ಲಿ ಜನಪ್ರಿಯರಾಗಿದ್ದರು.
ಮೃತರು ಪುತ್ರರಾದ ಪದ್ಮಯ್ಯ ಗೌಡ, ವೆಂಕಪ್ಪ ಬೊಳ್ಳೂರು, ವಾಸುದೇವ ಗೌಡ, ಪ್ರಕಾಶ್ ಬೊಳ್ಳೂರು, ಪುತ್ರಿಯರಾದ ಶ್ರೀಮತಿ ನಾಗವೇಣಿ, ಶ್ರೀಮತಿ ಸಾವಿತ್ರಿ, ಶ್ರೀಮತಿ ಯಮುನಾ, ಶ್ರೀಮತಿ ಚಂದ್ರಾವತಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.










