ಮೊಟ್ಟೆಮನೆ ವೀರಪ್ಪ ಗೌಡರು ಮತ್ತು ಮನೆಯವರಿಂದ ಸಮಾಜಕ್ಕೆ ಉತ್ತಮ ಕೊಡುಗೆ – ಎಸ್.ಎನ್.ಮನ್ಮಥ

ಐವರ್ನಾಡಿನಲ್ಲಿ ದಿ.ಮೊಟ್ಟೆಮನೆ ಬೆಳ್ಯಪ್ಪ ಗೌಡ ಮತ್ತು ದಿ.ಕೊರಪ್ಪೊಳು ದಂಪತಿ ಸ್ಮರಣಾರ್ಥ ಮೊಟ್ಟೆಮನೆ ವೀರಪ್ಪ ಗೌಡ ಮತ್ತು ಮಕ್ಕಳು ಕೊಡುಗೆಯಾಗಿ ನೀಡಿದ ನೂತನ ಪ್ರಯಾಣಿಕರ ತಂಗುದಾಣದ ಲೋಕಾರ್ಪಣಾ ಕಾರ್ಯಕ್ರಮವು ಡಿ.04 ರಂದು ನಡೆಯಿತು.















ನಿವೃತ್ತ ಯೋಧ ಹಾಗೂ ಹಿರಿಯರಾದ ವೀರಪ್ಪ ಗೌಡ ಮಡ್ತಿಲರವರು ರಿಬ್ಬನ್ ಕಟ್ ಮಾಡಿ ಬಳಿಕ ದೀಪ ಬೆಳಗಿಸಿ ನೂತನ ತಂಗುದಾಣವನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಸಹಕಾರಿ ಸಂಘದ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವೀರಪ್ಪ ಗೌಡರವರು ತನ್ನ ತಂದೆ ತಾಯಿಯ ಹೆಸರಲ್ಲಿ ಪ್ರಯಾಣಿಕರ ತಂಗುದಾಣವನ್ನು ಕೊಡುಗೆಯಾಗಿ ನೀಡಿದ್ದಾರೆ.
ಇವರು ತಂದೆ ತಾಯಿಯನ್ನು ನೆನಪಿಸುವ ಕೆಲಸ ಮಾಡಿದ್ದಾರೆ.ಇದು ಯುವ ಜನತೆಗೆ ಪ್ರೇರಣೆಯಾಗಬೇಕು.ಸಮಾಜಕ್ಕೆ ಉತ್ತಮ ಕೊಡುಗೆ ನೀಡಿರುವುದನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ವೀರಪ್ಪ ಗೌಡ ಮೊಟ್ಟೆಮನೆ,ಶ್ರೀಮತಿ ಲೀಲಾ ಮೊಟ್ಟೆಮನೆ,ಸಹಕಾರಿ ಸಂಘದ ಉಪಾಧ್ಯಕ್ಷ ಮಹೇಶ ಜಬಳೆ,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ,ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ನಿವೃತ್ತ ಯೋಧರಾದ ವೀರಪ್ಪ ಗೌಡ ಮಡ್ತಿಲ, ಗ್ರಾಮ ಲೆಕ್ಕಾಧಿಕಾರಿ ಸುಜು, ಪಿ.ಡಿ.ಒ ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು.
ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್.ಕಾರ್ಯಕ್ರಮ ನಿರೂಪಿಸಿ,ಪಿಡಿಒ ಶ್ಯಾಮ್ ಪ್ರಸಾದ್ ಸ್ವಾಗತಿಸಿ,ಬಾಲಕೃಷ್ಣ ಕೀಲಾಡಿ ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಧೀರ್ ಮೊಟ್ಟೆಮನೆ, ಶ್ರೀಮತಿ ನಯನ, ಸುನಿಲ್ ಮೊಟ್ಟೆಮನೆ, ಸಹಕಾರಿ ಸಂಘದ ನಿರ್ದೇಶಕರು,ಸದಸ್ಯರು,ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯತ್ ಸದಸ್ಯರು,ಸಿಬ್ಬಂದಿ ವರ್ಗದವರು ಸೇರಿದಂತೆ ಗ್ರಾಮದ ಹಲವು ಜನ ಗಣ್ಯರು ಉಪಸ್ಥಿತರಿದ್ದರು.










