7 ದ್ವಿಚಕ್ರ ವಾಹನಗಳಿಗೆ ಹಾನಿ
ಅರಂಬೂರಿನ ರಾಜ್ಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಸರಣಿಯಾಗಿ ಕಾರೊಂದು ಗುದ್ದಿ ಹಾನಿಗೊಳಿಸಿದ ಘಟನೆ ಡಿ.7 ರಂದು ಮುಂಜಾನೆ ವರದಿಯಾಗಿದೆ.















ಮೈಸೂರು ಮೂಲದ ಕಾರೊಂದರಲ್ಲಿ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಕ್ಷೇತ್ರಗಳಿಗೆ ಸಂದರ್ಶನ ಮಾಡಿ ಮೈಸೂರಿಗೆ ಹಿಂತಿರುಗುತ್ತಿದ್ದ ವೇಳೆಯಲ್ಲಿ ಚಾಲಕ ನಿದ್ದೆಯ ಮಂಪರಿನಲ್ಲಿ ರಸ್ತೆ ಬದಿ ಪಾರ್ಕಿಂಗ್ ಮಾಡಲಾಗಿದ್ದ ಸುಮಾರು 7 ದ್ವಿಚಕ್ರ ವಾಹನಗಳಿಗೆ ತಾಗಿಸಿಕೊಂಡು ಕಾರನ್ನು ಚಲಾಯಿಸಿದ್ದು ಎಲ್ಲಾ ದ್ವಿಚಕ್ರ ವಾಹನಗಳಿಗೆ ಹಾನಿಯಾಯಿತು.
ಆರಂಬೂರಿನ ಭಜನಾ ಮಂದಿರದ ವಠಾರದಲ್ಲಿ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮ ನಡೆಯುತ್ತಿದುದ್ದರಿಂದ ದೀಪೋತ್ಸವಕ್ಕೆ ಬಂದವರು ತಮ್ಮ ವಾಹನಗಳನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿ ಹೋಗಿದ್ದರು.
ಘಟನೆ ನಡೆದ ತಕ್ಷಣ ವಿಷಯ ತಿಳಿದ ಸ್ಥಳೀಯರುಜಮಾಯಿಸಿದ್ದು ಕಾರುಗುದ್ದಿದ ರಭಸಕ್ಕೆ ವಾಹನಗಳು ಸಿಕ್ಕಿ ಹಾಕಿಕೊಂಡಿದ್ದರಿಂದ ಅದನ್ನು ಬೇರ್ಪಡಿಸಲು ಸ್ಥಳೀಯ ಯುವಕರು ಹರ ಸಾಹಸ ಪಡಬೇಕಾಯಿತು. ಕಾರಿನಲ್ಲಿ 5 ಮಂದಿ ಬಾಲಕರು ಸೇರಿದಂತೆ ಮಾಲಕ ಕಾರು ಚಲಾಯಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು
ತಿಳಿದು ಬಂದಿದೆ.
ಗುದ್ದಿದ ಪರಿಣಾಮ ಕಾರಿನ ಮುಂಭಾಗ ಜಖಂ ಗೊಂಡಿದೆ.










