ಆಲೆಟ್ಟಿ: ತೃಪ್ತಿ ಸ್ತ್ರೀ ಶಕ್ತಿ ಗೊಂಚಲಿನ ಮಹಾಸಭೆ,

0

ಪದಾಧಿಕಾರಿಗಳ ಆಯ್ಕೆ :ಅಧ್ಯಕ್ಷೆ – ರಾಜೀವಿ, ಕಾರ್ಯದರ್ಶಿ – ಸರೋಜಿನಿ, ಖಜಾಂಜಿ- ಶಂಕರಿ

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ತೃಷ್ತಿ ಸ್ತ್ರೀ ಶಕ್ತಿ ಗೊಂಚಲಿನ ಮಹಾಸಭೆಯು ಸಂಘದ ಅಧ್ಯಕ್ಷೆ ಲಲಿತಾ ರವರ ಅಧ್ಯಕ್ಷತೆಯಲ್ಲಿ ಆಲೆಟ್ಟಿ ಸಿ. ಎ. ಬ್ಯಾಂಕ್ ಸಭಾಭವನದಲ್ಲಿ ಡಿ.9 ರಂದು ನಡೆಯಿತು.

ಕಳೆದ ಸಾಲಿನ ಲೆಕ್ಕ ಪತ್ರವನ್ನು ಪವಿತ್ರ ಗುಂಡ್ಯ ರವರು ಮಂಡಿಸಿದರು. ಮುಂದಿನ ಸಾಲಿನ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷೆ ರಾಜೀವಿ ಪಾಲಡ್ಕ, ಕಾರ್ಯದರ್ಶಿ ಸರೋಜಿನಿ ಎಲಿಕ್ಕಳ, ಖಜಾಂಜಿ ಶಂಕರಿ, ಉಪಾಧ್ಯಕ್ಷೆ ಲೀಲಾವತಿ, ಜತೆ ಕಾರ್ಯದರ್ಶಿ ಮೀನಾಕ್ಷಿ ಯವರು ಆಯ್ಕೆಯಾದರು. ಅಂಗನವಾಡಿ ಕಾರ್ಯರ್ತೆ ರತ್ನಾವತಿ ವಾಲ್ತಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಪುಷ್ಪಲತಾ ಸ್ವಾಗತಿಸಿ, ಉಷಾ ರಂಗತ್ತಮಲೆ ವಂದಿಸಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು,
ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು. ಸಂಘದ ಸದಸ್ಯರು ಉಪಸ್ಥಿತರಿದ್ದರು.