ಜಯನಗರ: ಎಸ್ ಎಸ್ ಎಫ್ ರಿಲೀಫ್ ಗ್ರೂಪ್ ವತಿಯಿಂದ ಅನಾರೋಗ್ಯ ಪೀಡಿತ ಚಂದ್ರಶೇಖರ್ ರಿಗೆ ಸಹಾಯಧನ ಹಸ್ತಾಂತರ

0

ಜಯನಗರ: ಬೆನ್ನುಮೂಳೆಯ ಸಮಸ್ಯೆಯಿಂದ ಹಾಸಿಗೆ ಹಿಡಿದಿರುವ ಚಂದ್ರಶೇಖರ ರವರಿಗೆ ಜಯನಗರ ಎಸ್ ಎಸ್ ಎಫ್ ರಿಲೀಫ್ ಗ್ರೂಪ್ ವತಿಯಿಂದ ಧನ ಸಹಾಯ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ಈ ಕುಟುಂಬದ ಸಂಕಷ್ಟದ ಬಗ್ಗೆ ಸುದ್ದಿ ಪತ್ರಿಕೆಯಲ್ಲಿ ವರದಿ ಬಿತ್ತರಗೊಂಡ ಬಳಿಕ ಸ್ಥಳೀಯ ಎಸ್ ಎಸ್ ಎಫ್ ಸಂಘಟನೆಯ ಮುಖ್ಯಸ್ಥ ಶರೀಫ್ ಜಯನಗರ ರವರ ನೇತೃತ್ವದಲ್ಲಿ ದಾನಿಗಳ ಸಹಕಾರ ಪಡೆದು ಸಹಾಯ ಧನವನ್ನು ಸಂಗ್ರಹ ಮಾಡಲಾಯಿತು.

ವಾಟ್ಸಪ್ ಗ್ರೂಪ್ ಮೂಲಕ ಸುಮಾರು 22 ಸಾವಿರ ರೂಪಾಯಿ ಧನ ಸಹಾಯವನ್ನು ಸಂಗ್ರಹಿಸಿ ಚಂದ್ರಶೇಖರ್ ಅವರಿಗೆ ಡಿ 11 ರಂದು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಸ್ಥ ಶರೀಫ್ ಜಯನಗರ, ಜಲೀಲ್ ಜಯನಗರ, ಎಸ್ ಎಸ್ ಎಫ್ ಮೊಗರ್ಪಣೆ ಮಾಜಿ ಅಧ್ಯಕ್ಷ ಹಾಫಿಲ್ ಸಿದ್ದೀಕ್, ಮೊಗರ್ಪಣೆ ಎಸ್ ಎಸ್ ಎಫ್ ಪ್ರಧಾನ ಕಾರ್ಯದರ್ಶಿ ಮಿನ್ಹಜ್,ಸ್ಥಳೀಯ ನಿವಾಸಿ ಉಮೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.