ಶ್ರೀಮತಿ ಸತ್ಯವತಿ ದೋಣಿಮೂಲೆಯವರ ಶ್ರದ್ದಾಂಜಲಿ ಕಾರ್ಯಕ್ರಮ

0

ಆಲೆಟ್ಟಿ ಗ್ರಾಮದ ದೋಣಿಮೂಲೆ ನಿವಾಸಿ ದಿ. ರಾಮಕೃಷ್ಣ ನಾಯಕ್ ರವರ ಪತ್ನಿ ಶ್ರೀಮತಿ ಸತ್ಯವತಿ ಯವರು ನ. 30 ರಂದು ನಿಧನರಾಗಿದ್ದು, ಮೃತರ ಶ್ರದ್ಧಾಂಜಲಿ ಕಾರ್ಯಕ್ರಮ ಡಿ. 11 ರಂದು ಸುಳ್ಯದ ಕೇರ್ಪಳದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.

ದೋಣಿಮೂಲೆ ಜನಾರ್ದನ ಭಟ್ ರವರು ಸ್ತೋತ್ರ ಪಠಿಸಿದರು. ನಿವೃತ್ತ ಪ್ರಾಂಶುಪಾಲರಾದ ಕೆ. ಆರ್. ಗೋಪಾಲಕೃಷ್ಣ ರವರು ನುಡಿ ನಮನ ಸಲ್ಲಿಸಿದರು. ಹೇಮಂತ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು.
ಮೃತರ ಪುತ್ರರಾದ ಭಾಸ್ಕರ ನಾಯಕ್ ದೋಣಿಮೂಲೆ, ವೈಕುಂಠ ನಾಯಕ್ ದೋಣಿಮೂಲೆ, ಪುತ್ರಿ ಶ್ರೀಮತಿ ರೇವತಿ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು.
ಆಗಮಿಸಿದ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಿರಶಾಂತಿ ಕೋರಿದರು.