ಅಲ್ ಇಖ್ವಾನ್ ಕಬರ್ ಸಮಿತಿಯಿಂದ ಖಾದರ್ ಜಟ್ಟಿಪಳ್ಳರಿಗೆ ಬಿಳ್ಕೊಡುಗೆ

0

ಪವಿತ್ರ‌‌ ಉಮ್ರಾ ಮತ್ತು ಝಿಯಾರತ್ ಗಾಗಿ ಮಕ್ಕಾ ಮತ್ತು ಮದಿನಕ್ಕೆ ತೆರಳಿಲಿರುವ ಖಾದರ್ ಜಟ್ಟಿಪಳ್ಳ ರವರಿಗೆ ಅಲ್ ಇಖ್ವಾನ್ ಕಬರ್ ಸಮಿತಿ ವತಿಯಿಂದ ಬಿಳ್ಕೊಡುಗೆ ಸಮಾರಂಭ ಡಿ.11 ರಂದು ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.
ಗಾಂಧಿನಗರ ಮದರಸದ ಮುಖ್ಯ ಶಿಕ್ಷಕ ಸಿರಾಜುದ್ದೀನ್ ಸಖಾಫಿ ದುವಾಶಿರ್ವಚನ ನೀಡಿ ಯಾತ್ರೆಗೆ ಶುಭ ಹಾರೈಸಿದರು.
ಗಾಂಧಿನಗರ ಜಮಾಅತ್ ಕಮಟಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್ ಅಧ್ಯಕ್ಷತೆ ವಹಿಸಿದರು.
ಜಮಾಅತ್ ಕಮಿಟಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ ಶುಭ ಹಾರೈಸಿ ಮಾತನಾಡಿದರು.
ಅಲ್ ಇಖ್ವಾನ್ ಸಮಿತಿ ಸದಸ್ಯರಾದ ಶಾಲಿ ಕಟ್ಟೆಕ್ಕಾರ್, ಮುಸ್ತಫಾ ಕಲ್ಲಪಳ್ಳಿ,ಸಮೀರ್ ಮೊಬೈಲ್ ಹಾರ್ಟ್, ಕೆ ಎಂ ಅತ್ತಾವುಲ್ಲಾ ಮಲ್ನಾಡ್,ಸಮದ್ ಹಾಜಿ ಕಲ್ಲಪಳ್ಳಿ,ಕಯ್ಯುಮ್ ಕಟ್ಟೆಕ್ಕಾರ್, ನಾಸೀರ್ ಕಮ್ಮಾಡಿ,ಕಲಂದರ್ ನಾವೂರ್,ನಜೀರ್ ಸುಪ್ರೀಂ,ರಜ್ಜುಭಯ್ಯಾ,ಯಾಕುಬ್ ಹಾಜಿ ಎಸ್ ಟಿ,ಶಫಿಕ್ ಗಾಂಧಿನಗರ, ಶಹೀದ್ ಪಾರೆ,ರಹೀಮ್ ಕಲ್ಲಪಳ್ಳಿ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದರು.