ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್ ರಿಷಿಕಾ ಹೊಸೋಳಿಕೆಗೆ ಬೆಳ್ಳಿಪದಕ

0

ಇಂಪ್ಯಾಕ್ಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕಂದ್ರಪ್ಪಾಡಿ ಸರಕಾರಿ ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿನಿ, ಸುಳ್ಯ ಗುತ್ತಿಗಾರು ಪಿ.ಎಂ.ಶ್ರೀ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ ರಿಷಿಕಾ ಹೊಸೋಳಿಕೆ ಕಟಾದಲ್ಲಿ ದ್ವಿತೀಯ, ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇವರು ಪುತ್ತೂರು ಇಂಪ್ಯಾಕ್ಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿಯ ಮುಖ್ಯ ಶಿಕ್ಷಕ ಶಿಹಾನ್ ಟಿ.ಡಿ. ತೋಮಸ್ ಅವರಲ್ಲಿ ಕರಾಟೆ ಶಿಕ್ಷಣ ಪಡೆಯುತ್ತಿದ್ದಾರೆ. ಇವರು ಸುಳ್ಯ ಕಂದ್ರಪ್ಪಾಡಿಯ ಹೊಸೊಳಿಕೆ ನಿವಾಸಿ ತಾರಾನಾಥ್ ಮತ್ತು ಜಯಂತಿ ದಂಪತಿ ಪುತ್ರಿ.