Home Uncategorized ನಮ್ಮೂರಿನ ತೆರೆ ಮರೆಯ ಸಾಧಕ ಹಮೀದ್ ಭಾಯ್

ನಮ್ಮೂರಿನ ತೆರೆ ಮರೆಯ ಸಾಧಕ ಹಮೀದ್ ಭಾಯ್

0

ಅಲ್ ಕೋಬರ್ ನಲ್ಲಿ ಮ್ಯಾನ್ ಆಫ್ದ ಇಯರ್ 2024 ಅವಾರ್ಡ್ ಭಾಜನರಾದ ಸಮಾಜಸೇವಕ

ಸುಳ್ಯದ ಹಳೆಗೇಟು ಬೆಟ್ಟಂಪ್ಪಾಡಿ ನಿವಾಸಿ ದಿವಂಗತ ಮೂಸಾನ್ ರವರ ಪುತ್ರ ಹಾಜಿ ಹಮೀದ್. ಇವರು ಕಳೆದ 30 ವರ್ಷಗಳಿಂದ ವಿದೇಶದ ಸೌದಿ ಅರೇಬಿಯಾದಲ್ಲಿ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಅನಿವಾಸಿ ಭಾರತೀಯರ ಆಪದ್ಬಾಂಧವರಾಗಿ ಅಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಜೀವನ ನಿರ್ವಹಣೆಗೆಂದು ವಿದೇಶಕ್ಕೆ ಹೋದ ಇವರು ಅಲ್ಲಿ ತಮ್ಮ ಕೆಲಸದ ಬಿಡುವಿನ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.
ಕರ್ನಾಟಕ ಕಲ್ಚರಲ್ ಫೌಂಡೇಶನ್, ದಕ್ಷಿಣ ಕನ್ನಡ ಸುನ್ನಿ ಸೆಂಟರ್, ಮೂಡಡ್ಕ ಹಾಗೂ ದಾರುಲ್ ಇಕ್ಮ ಸಂಸ್ಥೆಗಳ ಸೌದಿ ಅರೇಬಿಯಾ ಭಾಗದ ಅಧ್ಯಕ್ಷರಾಗಿ, ಮುಕ್ಕ್ವೆಸಂಸ್ಥೆಯ ವಿದೇಶ ಕಮಿಟಿ ಅಧ್ಯಕ್ಷರಾಗಿ ಹೀಗೆ ಇನ್ನೂ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಇವರ ಈ ಎಲ್ಲ ಸೇವೆಯನ್ನು ಗುರುತಿಸಿರುವ D. K. S. C ಮಂಗಳೂರು ಅಲ್ ಕೋಬರ್ ಯೂನಿಟ್ ವತಿಯಿಂದ ಮ್ಯಾನ್ ಆಫ್ ದಿ ಇಯರ್ ಅವಾರ್ಡ್ 2024 ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದೆ.

ವಿಶೇಷವಾದ ಇವರ ಸಾಧನೆಗಳ ಪಟ್ಟಿಯಲ್ಲಿ ಕಳೆದ ವರ್ಷ ಉಮ್ರಾಯಾತ್ರೆ ಗೆಂದು ಸೌದಿ ಅರೇಬಿಯಕ್ಕೆ ತೆರಳಿದ್ದ ಸುಮಾರು 187 ಯಾತ್ರಿಕರು ಅಲ್ಲಿ ಸಂಕಷ್ಟದಲ್ಲಿ ಈಡಾದಾಗ ಸ್ಥಳೀಯ ಸಂಘ ಸಂಸ್ಥೆಗಳ,ದಾನಿಗಳ ಸಹಕಾರ ಪಡೆದು ಅವರನ್ನು ಮರಳಿ ಭಾರತಕ್ಕೆ ಮರಳಿಸುವಲ್ಲಿ ಪ್ರಯತ್ನಿಸಿರುವ ಹತ್ತಾರು ಮುಖಂಡರ ಪೈಕಿ ಇವರು ಕೂಡ ಓರ್ವರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಈ ಅನನ್ಯ ಸೇವೆಗಳು ಸಮಾಜಕ್ಕೆ ಮಾದರಿಯಾಗಿದ್ದು ಇಂಥವರನ್ನು ನಮ್ಮೂರಿನವರು ಎಂದು ಹೇಳಲು ತುಂಬಾ ಗೌರವ ಎನಿಸುತ್ತಿದೆ.ವಿದೇಶದಲ್ಲಿ ನಾನಾ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿದೆ.
ಪವಿತ್ರ ಹಜ್ ಯಾತ್ರೆಗೆಂದು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಇನ್ನಿತರ ಭಾಗಗಳಿಂದ ತೆರಳಿದ ಹಾಜ್ಜಾಜಿ ಗಳಿಗೆ ಸಹಾಯ ಸಹಕಾರವನ್ನು ನೀಡುವ ಸಂಘ ಸಂಸ್ಥೆಗಳಲ್ಲಿ ಇವರು ಗುರುತಿಸಿಕೊಂಡಿದ್ದಾರೆ.

ವಿಶೇಷವಾಗಿ ಈ ಭಾಗದಿಂದ ತೆರಳುವ ನೂರಾರು ಉಲಮಾ ಉಮರಾ ನೇತಾರರಿಗೆ ವಿದೇಶದಲ್ಲಿ ಇವರು ಓರ್ವ ಆಶಾದಾಯಕ ವ್ಯಕ್ತಿಯಾಗಿ ನಮ್ಮೂರಿನ ಸಮಾಜಸೇವಕನಾಗಿ ಗುರುತಿಸಿಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ.

ಹಸೈನಾರ್ ಜಯನಗರ✍️

NO COMMENTS

error: Content is protected !!
Breaking