








ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ರಚನೆಯು ಜಿಲ್ಲಾ ಧಾರ್ಮಿಕ ಪರಿಷತ್ ನ ನಿರ್ಣಯದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ರ ವಿಧಿ 25 ರನ್ವಯ ಆದೇಶ ಹೊರಡಿಸಿದ್ದು 3 ವರ್ಷಗಳ ಅವಧಿಗೆ ನೂತನ ಸಮಿತಿ ರಚನೆಗೊಂಡಿದೆ.
ಅರ್ಚಕ ರಾಜೇಂದ್ರ ಪ್ರಸಾದ್ ಮೂಡತ್ತಾಯ,
ಪ್ರಸಾದ್ ಕುಮಾರ್ ನಾಗಪಟ್ಟಣ,ಶ್ರೀಮತಿ ಜಯಲಕ್ಷ್ಮಿ ನಾರ್ಕೋಡು, ಶ್ರೀಮತಿ ಮಾಲಾ ನಾಗಪಟ್ಟಣ, ಆನಂದ ಕುಮಾರ್ ನಾಗಪಟ್ಟಣ, ದಯಾನಂದ ಪಿ. ಎನ್ ಪಾತಿಕಲ್ಲು, ದಿನೇಶ್ ಕೆ. ಎಸ್ ಕೋಲ್ಚಾರು, ರಾಧಾಕೃಷ್ಣ ಕೋಲ್ಚಾರು, ಬಾಬು ಗೌಡ ಬಿ.ನಾಗಪಟ್ಟಣ ಇವರನ್ನು ಆಯ್ಕೆ ಮಾಡಲಾಗಿದೆ.
ಮುಂದಿನ ಒಂದು ವಾರದೊಳಗಾಗಿ ಆಡಳಿತಾಧಿಕಾರಿಯವರು ಸದಸ್ಯರ ಸಭೆ ಕರೆದು ಅಧ್ಯಕ್ಷರ ಆಯ್ಕೆ ಮಾಡಿ ಪ್ರಸ್ತಾವನೆ ಸಲ್ಲಿಸಲು ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.



