









ಅಜ್ಜಾವರ : ಮೇದಿನಡ್ಕ ಶ್ರೀ ರಾಮ ಭಜನಾ ಮಂದಿರದಲ್ಲಿ ಸುಮಾರು 40 ವರ್ಷಗಳಿಂದ ನಡೆಸಿಕೊಂಡು ಬಂದ ಮನೆ ಮನೆ ಭಜನಾ ಸಂಕೀರ್ತನೆಯು ಇಂದು ಶ್ರೀ ಮಹಾಗಣಪತಿ ಹೋಮದೊಂದಿಗೆ ಚಾಲನೆ ನೀಡಲಾಯಿತು. ಪೂಜಾ ವಿಧಿ ವಿಧಾನಗಳನ್ನು ಗಣೇಶ್ ಭಟ್ ಸುಳ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಊರ ಭಕ್ತವೃಂದ ಉಪಸ್ಥಿತರಿದ್ದರು .ಇಂದಿನಿಂದ ನಿರಂತರವಾಗಿ ಒಂದು ತಿಂಗಳ ಕಾಲ ಮನೆ ಮನೆ ಭಜನಾ ಸಂಕೀರ್ತನೆ ನಡೆದು ಮುಂಬರುವ ಜನವರಿ 15 ರಂದು ಪೊಂಗಲ್ ಆಚರಣೆಯೊಂದಿಗೆ ಸಮಾಪ್ತಿಗೊಳ್ಳಲಿದೆ.










