ತಮಿಳುನಾಡು ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಇವರು ನಡೆಸಿದ 3ನೇ ದಕ್ಷಿಣ ಭಾರತ ಮಟ್ಟದ ವೆಟರನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಡಿ. 13 ಮತ್ತು 14ರಂದು ತಮಿಳುನಾಡಿನ ತಿರುವಣ್ಣಮಲೈ ಎಸ್.ಡಿ.ಎ.ಟಿ. ಕ್ರೀಡಾಂಗಣದಲ್ಲಿ ನಡೆಯಿತು.









ಈ ಕ್ರೀಡಾಕೂಟದಲ್ಲಿ ಪ್ರವೀಣ ಕುಮಾರ ಪವಿತ್ರಮಜಲು ಇವರು ಭಾಗವಹಿಸಿದ್ದು ಗುಂಡು ಎಸೆತದಲ್ಲಿ ಪ್ರಥಮ, ಡಿಸ್ಕಸ್ ಎಸೆತದಲ್ಲಿ ದ್ವಿತೀಯ ಮತ್ತು ಹ್ಯಾಮರ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಐವರ್ನಾಡು ಗ್ರಾಮದ ಪವಿತ್ರಮಜಲು ಮನೆಯ ದಿ. ದೇವಪ್ಪ ಗೌಡ ಮಾಸ್ತರ್ ಪವಿತ್ರಮಜಲು ಇವರ ಪುತ್ರರಾಗಿದ್ದು, ಮುಂದೆ ಫೆಬ್ರವರಿ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.










