ಗಾಂಧಿನಗರದಲ್ಲಿ ಜೀಪು- ಕಾರು ಅಫಘಾತ – 2 ತಾಸುಗಳು ರಸ್ತೆಯಲ್ಲೇ ಉಳಿದ ವಾಹನಗಳು

0

ಪೋಲಿಸರ ಆಗಮನದ ಬಳಿಕ ವಾಹನಗಳ ತೆರವು

ಸುಳ್ಯದ ಗಾಂಧಿನಗರ ಪೆಟ್ರೋಲ್ ಬಂಕಿನ ಮುಂಭಾಗದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಜೀಪು ಮತ್ತು ಕಾರು ನಡುವೆ ಇಂದು ಬೆಳಗ್ಗಿನ ಜಾವದಲ್ಲಿ ಅಫಘಾತ ಸಂಭವಿಸಿದೆ.

ಗಾಂಧಿನಗರ ಹೆಚ್. ಪಿ. ಪೆಟ್ರೋಲ್ ಬಂಕ್ ಗೆ ಡೀಸಲ್ ತುಂಬಲು ಜೀಪನ್ನು ತಿರುಗಿಸುತ್ತಿರುವ ಸಂದರ್ಭದಲ್ಲಿ ಕಲ್ಲುಗುಂಡಿ ಕಡೆಯಿಂದ ಬಂದ ಸೆಲೇರಿಯಾ ಕಾರು ನೇರವಾಗಿ ಬಂದು ಜೀಪಿನ ಎಡ ಬದಿಯ ಬಾಗಿಲಿಗೆ ಬಡಿಯಿತು. ಕಾರು ಬರುತ್ತಿರುವುದನ್ನು ಗಮನಿಸಿದ ಜೀಪು ಚಾಲಕ ಜೀಪನ್ನು ಮತ್ತಷ್ಟು ವೇಗವಾಗಿ ಬಂಕ್ ನ ಒಳಗೆ ಚಲಾಯಿಸಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದಂತಾಗಿದೆ. ಇಲ್ಲವಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗಾಯವಾಗುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಮಾತನಾಡುತ್ತಿದ್ದರು.

ಕಾರಿನ ಮುಂಭಾಗದ ಎಡ ಬದಿ ಸಂಪೂರ್ಣವಾಗಿ ಜಖಂಗೊಂಡಿದೆ.
ಜೀಪಿನ ಎಡಬದಿಯ ಬಾಗಿಲಿಗೆಹಾನಿ
ಯುಂಟಾಗಿದೆ.
ಬೆಳಗಿನ ಜಾವ 7.30 ಕ್ಕೆ ಅಫಘಾತ ಸಂಭವಿಸಿದ್ದು 9.30 ರ ತನಕ ವಾಹನಗಳನ್ನು ತೆರವುಗೊಳಿಸದೆ ಇತರ
ವಾಹನ ಸಂಚಾರಕ್ಕೆ ಸ್ವಲ್ಪ ಮಟ್ಟಿಗೆ ಅಡಚಣೆಯಾಗಿತ್ತು.
ಬಳಿಕ ಸ್ಥಳೀಯರು
ನೀಡಿದ ದೂರಿನ ಮೇರೆಗೆ ಪೋಲಿಸರು ಬಂದು ಮಾತುಕತೆ ನಡೆಸಿ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿದರು.