ಆರಿಕೋಡಿ ಉತ್ಸವಕ್ಕೆ ಫೆ.12ರಂದು ಸುಳ್ಯದಿಂದ ಹಸಿರುವಾಣಿ ಸಮರ್ಪಣೆ

0

ಬೆಳ್ತಂಗಡಿ ತಾಲೂಕಿನ ಬೆಳಾಲಿನಲ್ಲಿರುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ‌ಕ್ಷೇತ್ರದಲ್ಲಿ ಆರಿಕೋಡಿ‌ ಉತ್ಸವಗಳು ಆರಂಭಗೊಂಡಿದ್ದು ಸುಳ್ಯದಿಂದ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆ ಫೆ.12ರಂದು ನಡೆಯಲಿದೆ. ಮೂರನೇ ವರ್ಷದ ಹಸಿರುವಾಣಿ‌ ಸಮರ್ಪಣೆಯಾಗುತ್ತಿದ್ದು ಹಸಿರುವಾಣಿ ನೀಡುವವರು ಫೆ.12ರಂದು ಬೆಳಗ್ಗೆ 8ಗಂಟೆ ಮೊದಲು ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರಕ್ಕೆ ತಲುಪಿಸಬಹುದಾಗಿದೆ.