ರೆಂಜಾಳದಲ್ಲಿ ಅದ್ದೂರಿಯಾಗಿ ನಡೆದ ಪಾವಂಜೆ ಮೇಳದವರ ಶ್ರೀ ‘ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ

0

ಮರ್ಕಂಜದ ರೆಂಜಾಳದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟರ ಸಾರಥ್ಯದ ಶ್ರೀ ಪಾವಂಜೆ ಮೇಳದವರಿಂದ ಶ್ರೀಮತಿ ಪ್ರೇಮ ಜೆ. ರೈ ಮತ್ತು ಜಗನ್ಮೋಹನ ರೈ ಹೈದಂಗೂರು ಮತ್ತು ಮನೆಯವರ ಸೇವೆಯಾಟವಾಗಿ ಶ್ರೀ ದೇವಿ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಬಯಲಾಟವು ಅದ್ದೂರಿಯಾಗಿ ನಡೆಯಿತು.

ಸಂಜೆ ಸರಿಯಾಗಿ 6.30ಕ್ಕೆ ಚೌಕಿ ಪೂಜೆ ನಡೆಯಿತು. ರಾತ್ರಿ 8 ರ ನಂತರ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಊರ ಹಾಗೂ ಪರವೂರ ನೂರಾರು ಕಲಾಭಿಮಾನಿಗಳು ಯಕ್ಷಗಾನ ಬಯಲಾಟ ವೀಕ್ಷಿಸಿದರು. ಅನ್ನಸಂತರ್ಪಣೆಯ ಮೊದಲು ಮತ್ತು ನಂತರ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಶ್ರೀ ಕ್ಷೇತ್ರ ರೆಂಜಾಳದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಶ್ರೀ ಶಾಸ್ತ್ರವು ಯುವಕ ಮಂಡಲದ ಸದಸ್ಯರು, ಜಗನ್ಮೋಹನ ರೈಯವರ ಮನೆಯವರು ಮತ್ತು ಬಂಧುಗಳು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.