ಉಳಿಕೆ ಮೊತ್ತ, ಬಡ ಕುಟುಂಬದ ಆಶಕ್ತರಿಗೆ ದೇಣಿಗೆ














ಹರಿಹರ ಪಲ್ಲತ್ತಡ್ಕ ಗ್ತಾಮದ ಮುಂಡಾಜೆ ಮನೆತನದ ದಿl ದಿವಾಕರ ಮುಂಡಾಜೆ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ ಇತ್ತೀಚಿಗೆ ಆಯೋಜಿಸಲಾಗಿತ್ತು. ಪಂದ್ಯಾಟ ಅಯೋಜಿಸಿ ಉಳಿಕೆ ಮೊತ್ತವನ್ನು ಬಡತನದ ಕುಟುಂಬದ ಆಶಕ್ತರಿಗೆ ಫೆ.17 ರಂದು ಹಸ್ತಾಂತರಿಸಲಾಯಿತು.
ಕೊಲ್ಲಮೊಗ್ರ ಗ್ರಾಮದ ಮಲ್ಲಾಜೆ ಅಶಕ್ತ ಮಹಿಳೆ ಲಲಿತರಿಗೆ ಹಾಗು,ಅನಾರೋಗ್ಯದಿಂದ ಬಳಲುತ್ತಿರುವ ಐನೆಕಿದು ಗ್ರಾಮದ ಕೆದಿಲ ಷಣ್ಮುಖ ಎಂಬವರಿಗೆ ಧನಸಹಾಯ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜನೆಯ ಗೌರವದ್ಯಕ್ಷರಾದ ಹರ್ಷ ಮುಂಡಾಜೆ,ದಿ.ದಿವಾಕರ ಮುಂಡಾಜೆರವರ ಸಹೋದರ ಪೃಥ್ವಿಚಂದ್ರ ಮುಂಡಾಜೆ, ಸತೀಶ್ ಕೂಜುಗೋಡು,ವಸಂತ ಕೆದಿಲ, ಅದ್ಯಕ್ಷ ಉಜ್ವಲ್ ಕಜ್ಜೋಡಿ,ಸಂತೋಷ ಪಳಂಗಾಲ,ಯೋಗೀಶ್ ,ಆಶಿಶ್ ,ಮಧು, ಕಾರ್ತಿಕ್,ಮೋಹಿತ್ ಹರಿಪ್ರಸಾದ್,ಪುರುಷೋತ್ತಮ ತಾರಾನಾಥ, ಕುಶಾಲಪ್ಪ ಕಾಂತುಮೇರಿ ಮೊದಲಾದವರು ಉಪಸ್ಥಿತರಿದ್ದರು.







