ಉಪಾಧ್ಯಕ್ಷತೆಗೆ ಸ್ಪರ್ಧೆ : ಅದೃಷ್ಟದಾಟದಲ್ಲಿ ವಿಜಯಕುಮಾರ್ ಉಬರಡ್ಕರಿಗೆ ಗೆಲುವು
ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಗೆ ನಿರ್ದೇಶಕ ರಾಜೇಶ್ ಭಟ್ ನೆಕ್ಕಿಲ ಗೈರು
ಉಬರಡ್ಕಮಿತ್ತೂರು ಸಹಕಾರ ಸಂಘದ ಅಧ್ಯಕ್ಷರಾಗಿ ಹರಿಪ್ರಸಾದ್ ಪಾನತ್ತಿಲ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷತೆಗೆ ಬಿಜೆಪಿಯೊಳಗೆ ಸ್ಪರ್ಧೆ ಏರ್ಪಟ್ಟು ವಿಜಯ ಕುಮಾರ್ ಉಬರಡ್ಕ ಗೆಲುವು ಸಾಧಿಸಿದ್ದಾರೆ.














ಅಧ್ಯಕ್ಷತೆಗೆ ಹರಿಪ್ರಸಾದ್ ಪಾನತ್ತಿಲ ಹಾಗೂ ಉಪಾಧ್ಯಕ್ಷತೆಗೆ ಪ್ರಭಾಕರ ಅಮೈ ನಾಮಪತ್ರ ಸಲ್ಲಿಸುವುದೆಂದು ಪಕ್ಷದೊಳಗೆ ಮಾತುಕತೆ ಆಗಿತ್ತು. ಅದರಂತೆ ಅಧ್ಯಕ್ಷತೆಗೆ ಹರಿಪ್ರಸಾದ್ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷತೆಗೆ ಪ್ರಭಾಕರ ಅಮೈ ಅಧಿಕೃತ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು. ಆದರೆ ಉಪಾಧ್ಯಕ್ಷತೆ ಆಕಾಂಕ್ಷಿಯಾಗಿದ್ದ ವಿಜಯಕುಮಾರ್ ಉಬರಡ್ಕ ರವರು ಕೂಡಾ ನಾಮಪತ್ರ ಸಲ್ಲಿಸಿದರು.
ಅಧ್ಯಕ್ಷತೆಗೆ ಹರಿಪ್ರಸಾದ್ ಪಾನತ್ತಿಲ ಒಬ್ಬರೇ ನಾಮಪತ್ರ ಸಲ್ಲಿಸಿದ್ದುದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ : ಉಪಾಧ್ಯಕ್ಷತೆಗೆ ವಿಜಯಕುಮಾರ್ ಹಾಗೂ ಪ್ರಭಾಕರ ಅಮೈ ರವರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಯಿತು. ಒಟ್ಟು 12 ಸದಸ್ಯ ಬಲವಿರುವ ಇಲ್ಲಿ ಸಹಕಾರ ಭಾರತಿಯ 9 ಹಾಗೂ ಸಹಕಾರ ಬಳಗದ 3 ಮಂದಿ ನಿರ್ದೇಶಕರಿದ್ದಾರೆ.
ಮತದಾನದ ದಿನ ರಾಜೇಶ್ ಭಟ್ ನೆಕ್ಕಿಲ ಗೈರಾಗಿದ್ದರು. ಆದ್ದರಿಂದ ಒಟ್ಟು 11 ನಿರ್ದೇಶಕ ಹಾಗೂ 1 ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸೇರಿ 12 ಮಂದಿ ಮತ ಚಲಾಯಿಸಿದರು.
ಮತ ಎಣಿಕೆ ನಡೆದಾಗ ವಿಜಯಕುಮಾರ್ ಉಬರಡ್ಕ ಹಾಗೂ ಪ್ರಭಾಕರ ಅಮೈ ತಲಾ 6 ಮತ ಪಡೆದು ಸಮಬಲ ಸಾಧಿಸಿದರು. ಬಳಿಕ ಚೀಟಿಯಲ್ಲಿ ಹೆಸರು ಬರೆದು ಅದೃಷ್ಟ ಆಟ ನಡೆಸಿದಾಗ ವಿಜಯ ಕುಮಾರ್ ಉಪಾಧ್ಯಕ್ಷ ರಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಶಿವಲಿಂಗಯ್ಯ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.







