ಅಧ್ಯಕ್ಷತೆಗೆ ಪಕ್ಷ ನನ್ನನ್ನು ಗುರುತಿಸಿರುವುದು ಬೇಸರ ತರಿಸಿದೆ : ರಾಜೇಶ್ ಭಟ್ ನೆಕ್ಕಿಲ

0

“ನಾನು ಉಬರಡ್ಕ‌ಮಿತ್ತೂರು ಸಹಕಾರ ಸಂಘದಲ್ಲಿ ನಾಲ್ಕು ಬಾರಿ ನಿರ್ದೇಶಕನಾಗಿ, ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ.‌ ಅಧ್ಯಕ್ಷತೆ ವಿಚಾರದಲ್ಲಿ ಪಕ್ಷ ನನ್ನನ್ನು ಗುರುತಿಸದಿರುವುದು ಬೇಸರ ತರಿಸಿದೆ. ಆದ್ದರಿಂದ ನಾನು ಅಧ್ಯಕ್ಷತೆ ಚುನಾವಣೆಯಿಂದ ದೂರು ನಿಂತಿದ್ದೇನೆ” ಎಂದು ಉಬರಡ್ಕ‌ಮಿತ್ತೂರು ಸಹಕಾರ ಸಂಘದ ಹಿರಿಯ ನಿರ್ದೇಶಕ ರಾಜೇಶ್ ಭಟ್ ನೆಕ್ಕಿಲ ತಿಳಿಸಿದ್ದಾರೆ.

ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಗೆ ಗೈರಾಗಿರುವ ಕುರಿತು ರಾಜೇಶ್ ಭಟ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ
“ಸಹಕಾರ ಸಂಘದ ಅಧ್ಯಕ್ಷ ಸ್ಥಾನವನ್ನು ನಾನು ಬಾಯಿಬಿಟ್ಟು ಕೇಳಿಲ್ಲ. ಅದಕ್ಕಾಗಿ ಯಾವುದೇ ಲಾಬಿ ಮಾಡಿಲ್ಲ. ಹಿರಿಯ ನಿರ್ದೇಶಕ ಆಗಿರುವುದರಿಂದ ನನ್ನನ್ನು ಗುರುತಿಸಬಹುದೆಂಬ ಭಾವನೆ ನನ್ನಲ್ಲಿ ಇತ್ತು. ನಮ್ಮ ನಿರ್ದೇಶಕರು ಮತ್ತು ಜನರು ನನ್ನ ಹೆಸರನ್ನು ಹೇಳಿತ್ತಿರುವುದು ನನಗೆ ತಿಳಿದಿತ್ತು. ಆದರೆ ಕೊನೆಯ‌ ಕ್ಷಣದಲ್ಲಿ ಕೆಲ ನಿರ್ದೇಶಕರು ಕೆಲವರ ಮಾತನ್ನು ಕೇಳಿಕೊಂಡು ನಾನು ಬೇಡವೆನ್ನುವಂತೆ ಮಾಡಿದ್ದಾರೆ.

ಹರಿಪ್ರಸಾದ್ ಅಧ್ಯಕ್ಷ ಆದುದರಲ್ಲಿ‌ ನನಗೆ ಬೇಸರವಿಲ್ಲ. ಅವರಿಗೆ ಬೆಂಬಲ ಇದೆ. ಆದರೆ ಪಕ್ಷ ಗುರುತಿಸದಿರುವುದು ಮಾತ್ರ ಬೇಸರ ಎಂದು ರಾಜೇಶ್ ಭಟ್ ನೆಕ್ಕಿಲ ತಿಳಿಸಿದ್ದಾರೆ.