ಮಾ. 25: ದೇಶಕೋಡಿ ತರವಾಡು ಧರ್ಮದೈವ, ರಕ್ತೇಶ್ವರಿ ಹಾಗೂಪಂಜುರ್ಲಿ, ಗುಳಿಗ ದೈವಸ್ಥಾನದಲ್ಲಿ ಪುನ: ಪ್ರತಿಷ್ಠಾ ಕಲಶೋತ್ಸವ

0

ಮರ್ಕಂಜ ಗ್ರಾಮದ ದೇಶಕೋಡಿ -ಉಬರಡ್ಕ ಕುಟುಂಬದ ಶ್ರೀ ಧರ್ಮದೈವ ರಕ್ತೇಶ್ವರಿ ಹಾಗೂ ಪಂಜುರ್ಲಿ, ಗುಳಿಗ ಸಾನಿಧ್ಯದಲ್ಲಿ ಮಾ. 25 ರಂದು ಬೆಳಗ್ಗೆ ಗಂಟೆ 9-28 ರಿಂದ 11-30 ರ ಶುಭಮುಹೂರ್ತದಲ್ಲಿ
ಧರ್ಮದೈವ ರಕ್ತೇಶ್ವರಿ ಹಾಗೂ ಪಂಜುರ್ಲಿ, ಗುಳಿಗ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕವು ನಡೆಯಲಿರುವುದು. ಮಧ್ಯಾಹ್ನ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆಯಾಗಲಿರುವುದು.ಅದೇ ದಿನ ರಾತ್ರಿ ಗಂಟೆ 7-00ಕ್ಕೆ ಕೇದಗೆ ಬನದಲ್ಲಿ ದುರ್ಗಾಪೂಜೆಯು ನಡೆಯಲಿರುವುದು.