ಚೆಂಬು :ಮೀನು ಹಿಡಿಯಲು ಹೋದ ವ್ಯಕ್ತಿ ಹೆಣವಾಗಿ ಪತ್ತೆ

0

ಚೆಂಬು ಗ್ರಾಮದ ಪರ್ದಾಯ ಗದ್ದೆ ಭಾಸ್ಕರ ಬೆಳ್ಚಪ್ಪಾಡ ಎಂಬವರು ಮೀನು ಹಿಡಿಯಲು ಹೊಳೆಗೆ ಹೋದವರು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಮೀನು ಹಿಡಿಯಲು ಹೊಳೆಗೆ ಹೋದವರು ಬಾರದೆ ಇದ್ದಾಗ ಅವರನ್ನು ಹುಡುಕಿಕೊಂಡು ಮನೆಯವರು ಹೋಗಿದ್ದು, ಹೊಳೆ ಬದಿಯಲ್ಲಿ ಮೃತಪಟ್ಟು ಬಿದ್ದಿದ್ದರು.

ಮಡಿಕೇರಿ ಪೊಲೀಸ್ ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಮೃತ ದೇಹವನ್ನು ಮಡಿಕೇರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.