ಕಂಟೈನರ್ ಚಾಲಕನಿಗೆ ಗಾಯ – ಆಸ್ಪತ್ರೆಗೆ ದಾಖಲು
ಮೊಗರ್ಪಣೆಯಲ್ಲಿ ರಾತ್ರಿ ನಡೆದ ಘಟನೆ














ಹಳೆಗೇಟು ಮೊಗರ್ಪಣೆ ಸೇತುವೆಯ ಸಮೀಪ ಕಂಟೈನರ್ ಲಾರಿಯೊಂದು ಕಳೆದ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು ಘಟನೆಯಲ್ಲಿ ಕಂಟೈನರ್ ಚಾಲಕನಿಗೆ ಗಾಯವಾಗಿದೆ. ಸುಳ್ಯದ ಶಿವ ಆಂಬುಲೆನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.
ಕಂಟೈನರ್ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿತ್ತೆಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ರಸ್ತೆಯಲ್ಲಿ ಡೀಸೆಲ್ ಚೆಲ್ಲಿದೆ
ಅಪಘಾತ ನಡೆದ ಜಾಗದಲ್ಲಿ ಮಟೈನರಗ ನ ಡೀಸೆಲ್ ರಸ್ತೆಯಲ್ಲಿ ಚೆಲ್ಲಿರುವುದರಿಂದ ಇತರ ವಾಹನ ಸವಾರರು ಜಾಗರೂಕತೆಯಿಂದ ತಮ್ಮ ವಾಹನಗಳನ್ನು ಚಲಾಯಿಸಬೇಕಾಗಿದೆ. ದ್ವಿಚಕ್ರ ವಾಹನದವರು ಸ್ಕಿಡ್ ಆಗಿ ಬೀಳುವ ಸಂಭವವಿದೆ. ರಾತ್ರಿ ಒಂದೆರಡು ವಾಹನದವರು ಬಿದ್ದಿದ್ದಾರೆ.








