ನಿನ್ನೆ ಕಂಟೈನರ್ ಲಾರಿ ಬಿದ್ದಲ್ಲಿಯೇ ನಡೆದ ಘಟನೆ
ಮೊಗರ್ಪಣೆ ಬಳಿ ನಿನ್ನೆ ರಾತ್ರಿ ಕಂಟೈನರ್ ಲಾರಿ ಪಲ್ಟಿಯಾಗಿ ಬಿದ್ದ ಜಾಗದಲ್ಲಿ ರಸ್ತೆಯಲ್ಲಿ ಡೀಸೆಲ್ ಚೆಲ್ಲಿರುವ ಕಾರಣ ದ್ವಿಚಕ್ರ ವಾಹನವೊಂದು ಸ್ಕಿಡ್ಡಾಗಿ ಬಿದ್ದು ಸವಾರ ಗಂಭೀರ ಗಾಯವಾಗಿ ಆತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ ಘಟನೆ ಮಾ 25 ರಂದು ರಾತ್ರಿ ಸುಮಾರು 12.45 ಕ್ಕೆ ಸಂಭವಿಸಿದೆ.














ಗಾಯಾಳು ಜಯನಗರ ಮಿಲಿಟರಿ ಕ್ವಾರ್ಟರ್ಸ್ ನ ಶಶಿ ಎಂದು ತಿಳಿದು ಬಂದಿದೆ.ಸುಳ್ಯದಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಅವರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಸುಳ್ಯ ಆಂಬುಲೆನ್ಸ್ ಚಾಲಕಮಾಲಕ ಸಂಘದ ಸದಸ್ಯರಿಂದ ಅನನ್ಯ ಸೇವೆ
ರಾತ್ರಿ ಘಟನೆ ನಡೆದ ಸಮಯದಿಂದ ಅಪಘಾತವಾದ ಜಾಗದಲ್ಲಿ ತಡರಾತ್ರಿ ಸುಮಾರು 3 ಗಂಟೆಯವರೆಗೆ ಸುಳ್ಯ ಆಂಬುಲೆನ್ಸ್ ಚಾಲಕ ಮಾಲಕ ಸಂಘದ ಸದಸ್ಯರುಗಳಾದ ಶಿವ ಪ್ರಸಾದ್,ರಫೀಕ್ ಬಾಳೆಮಕ್ಕಿ, ಸಮೀರ್ ಕಾಣಿಯೂರು,, ಸಿದ್ದೀಕ್, ಅಪ್ಪಿ ಮೊದಲಾದವರು ಸ್ಥಳದಲ್ಲಿಯೇ ನಿಂತು ಇತರ ವಾಹನ ಸವಾರರಿಗೆ ಸುರಕ್ಷಿತವಾಗಿ ಚಲಿಸಲು ಸಹಕರಿಸುವ ಮೂಲಕ ಅನನ್ಯ ಸೇವೆಯನ್ನು ನೀಡಿದ್ದಾರೆ.







