ಮುಗ್ಧ ಭಕ್ತಿಗೆ ದೇವರು ಸದಾ ಒಲಿಯುತ್ತಾನೆ, ಹಿಂದೂ ಸಮಾಜದ ಜೀವ ಶಕ್ತಿಯ ಕ್ಷೇತ್ರವಾಗಲಿದೆ – ಮೋಹನದಾಸ ಸ್ವಾಮೀಜಿ














ಸುಳ್ಯ ಕಸಬಾದ ಪೈಚಾರು ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನ,ಶ್ರೀಮಾರಿಯಮ್ಮ ವೀರಭದ್ರ ಸ್ವಾಮಿ ಕ್ಷೇತ್ರ ಸೇವಾಸಮಿತಿಯಆಶ್ರಯದಲ್ಲಿ ಎ. 20 ರಿಂದ 23 ರ ತನಕ ಶ್ರೀ ಕ್ಷೇತ್ರದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಹಾಗೂ ಭಕ್ತರಿಂದ ಮುಷ್ಠಿ ಹಣ ಸಮರ್ಪಣಾ ಕಾರ್ಯಕ್ರಮವು ಮಾ. 27 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು.

” ಮುಗ್ಧ ಭಕ್ತಿಗೆ ದೇವರು ಒಲಿಯುತ್ತಾನೆ. ಬಡತನ ಮತ್ತು ಪ್ರೀತಿ ಇದ್ದಲ್ಲಿ ದೇವರು ನೆಲೆಸಿರುತ್ತಾನೆ. ಈ ಕ್ಷೇತ್ರದಲ್ಲಿ ಇರುವ ಮಾಣಿಕ್ಯ ಇದೀಗ ಗೋಚರಕ್ಕೆ ಬಂದಿದೆ. ಹಿಂದೂ ಸಮಾಜಕ್ಕೆ ಜೀವಶಕ್ತಿ ನೀಡುವ ಕ್ಷೇತ್ರವಾಗಿ ಬೆಳಗಲಿದೆ. ಸಂಬಂಧಿಸಿದ ಸಮುದಾಯದವರು ಏಕ ಮನಸ್ಸಿನಿಂದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವಂತಾಗಬೇಕು ಇದರಿಂದ ಒಳಿತಾಗಲಿದೆ ಎಂದು ಆಶೀರ್ವಚನ ನೀಡಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ, ಮುಷ್ಠಿ ಹಣ ಸಮರ್ಪಿಸಿ ನಿಧಿ ಅಭಿಯಾನಕ್ಕೆ ಚಾಲನೆ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸುಂದರ್ ರಾವ್ ಹಳೆಗೇಟು ಅಧ್ಯಕ್ಷತೆ ವಹಿಸಿದ್ದರು.

ಅತಿಥಿಯಾಗಿ ಸುಳ್ಯ ಶಾಸಕಿ, ಸಮಿತಿ ಗೌರವಾಧ್ಯಕ್ಷರಾದ ಕು. ಭಾಗೀರಥಿ ಮುರುಳ್ಯ ರವರು ಮಾತನಾಡಿ, ಕ್ಷೇತ್ರದ ಜೀರ್ಣೋದ್ದಾರ ಕಾರ್ಯಕ್ಕೆ ಈಗಾಗಲೇ ರೂ. 5 ಲಕ್ಷ ನೀಡಲಾಗಿದೆ.ಸರಕಾರದಿಂದ ಮತ್ತೆ ಅನುದಾನ ಒದಗಿಸಿ ಕೊಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಕಾರ್ಯಾಧ್ಯಕ್ಷರಾದ ದೇವಿಪ್ರಸಾದ್ ಕೆ. ಎಸ್, ಆಡಳಿತ ಮೊಕ್ತೇಸರರಾದ ಸಂಜೀವ ಪೈಚಾರು, ಆಡಳಿತ ಸಮಿತಿ ಅಧ್ಯಕ್ಷ ವೇಣುಗೋಪಾಲ ಎಸ್ ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷರಾದ ಸುಂದರ್ ರಾವ್ ಬ್ರಹ್ಮಕಲಶೋತ್ಸವಕ್ಕೆ
ರೂ. 1 ಲಕ್ಷ ದೇಣಿಗೆಯ ಘೋಷಣೆ ಮಾಡಿ ಸ್ವಾಮೀಜಿ ಯವರಿಂದ ಮಂತ್ರಾಕ್ಷತೆ ಪಡೆದರು.
ಸಮಿತಿಯ ಸಂಚಾಲಕರಾದ ರಾಜೇಶ್ ಶೆಟ್ಟಿ ಮೇನಾಲ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ, ವೇಣುಗೋಪಾಲ ಎಸ್ ವಂದಿಸಿದರು. ಉಪ ಸಮಿತಿ ಸದಸ್ಯ ಉದಯ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.
ಪ್ರಮುಖರಾದ ವೆಂಕಟ್ ವಳಲಂಬೆ, ಗೋಕುಲ್ ದಾಸ್, ವಿನಯಕುಮಾರ್ ಕಂದಡ್ಕ,ಎ.ಟಿ.ಕುಸುಮಾಧರ, ಸುಭೋದ್ ಶೆಟ್ಟಿ ಮೇನಾಲ, ಬಾಲಗೋಪಾಲ ಸೇರ್ಕಜೆ, ರಾಮಕೃಷ್ಣ ಶಾಂತಿನಗರ, ಮಧುಸೂದನ ಪಿ. ಎಂ, ಮುಳಿಯ ಗೋವಿಂದ ಭಟ್, ಬುದ್ಧ ನಾಯ್ಕ್ ಹಳೆಗೇಟು, ಅಶೋಕ್ ಕೊಯಿಂಗೋಡಿ ಹಾಗೂ ಸಮಿತಿಯ ಪದಾಧಿಕಾರಿಗಳಾದ ಚಿದಾನಂದ ವಿದ್ಯಾನಗರ, ಗೌತಮ್ ಸೇರ್ಕಜೆ, ಕೇಶವ ಮಾಸ್ತರ್, ರಾಘವ ಪೆರಾಜೆ, ನಾರಾಯಣ ಎಸ್. ಎಂ, ಸುಂದರ ಕಡಪುರ, ಸದಾನಂದ ಪಿ, ದಾಮೋದರ ಮಂಚಿ, ಚಂದ್ರಶೇಖರ ಎಸ್. ಎ, ಆನಂದ ಬೆಟ್ಟಂಪಾಡಿ, ಚಂದ್ರ ರಾವ್, ಮಲ್ಲೇಶ್ ಬೆಟ್ಟಂಪಾಡಿ, ಅವಿನ್ ಬೆಟ್ಟಂಪಾಡಿ,ಶ್ರೀನಿವಾಸ್ ರಾವ್, ಅನೂಪ್ ಪೈ ಹಾಗೂ ಉಪ ಸಮಿತಿ ಸಂಚಾಲಕರು, ಸಮಿತಿಯ ಸದಸ್ಯರು, ಮಹಿಳಾ ಸಮಿತಿಯವರು ಭಾಗವಹಿಸಿದರು.







