













ಜಟ್ಟಿಪಳ್ಳದಲ್ಲಿ ಸಾರ್ವಜನಿಕರು ಕುಡಿಯುವ ನೀರಿನ ಬಾವಿಗೆ ಸಮೀಪದ ಮರಗಳಿಂದ ಎಲೆಗಳು ಹಾಗೂ ಇನ್ನಿತರ ಕಸ ಕಡ್ಡಿಗಳು ಬಿದ್ದು ನೀರು ಕುಡಿಯಲು ಯೋಗ್ಯವಲ್ಲದ ರೀತಿಯಲ್ಲಿ ಉಂಟಾಗಿದೆ.
ಇದರ ಬಗ್ಗೆ ನಗರ ಪಂಚಾಯತ್ ಗೆ ಹಲವಾರು ಜನರು ಮನವಿ ಸಲ್ಲಿಸಿದರು ಯಾವುದೇ ಸ್ಪಂದನೆ ಇಲ್ಲದೇ ಇರುವುದರಿಂದ ತಕ್ಷಣ ಸ್ವಚ್ಛಗೊಳಿಸಬೇಕೆಂದು ನ.ಪಂ.ಗೆ ಮನವಿ ಸಲ್ಲಿಸಲಾಯಿತು.
ಜಟ್ಟಿಪಳ್ಳ ಪರಿಸರದ ಬಹುತೇಕ ಜನರು ಕುಡಿಯಲು ಈ ಬಾವಿಯ ನೀರನ್ನೆ ಉಪಯೋಗಿಸುತ್ತಿದ್ದಾರೆ.
ಇದನ್ನು ಅದಷ್ಟೂ ಬೇಗ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಕುಡಿಯುವ ನೀರು ಉಪಯೋಗಿಸುವಂತೆ ಮಾಡಿಕೊಡಬೇಕಾಗಿ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶರೀಫ್ ಜಟ್ಟಿಪಳ್ಳ ,ಯುವ ಉದ್ಯಮಿ ಎನ್ ಆರ್ ರಂಜಿತ್ ಉಪಸ್ಥಿತರಿದ್ದರು.







