ಗುತ್ತಿಗಾರಿನಲ್ಲಿ “ಮಯೂರ ಬೇಕ್‌ಹೌಸ್” ಶುಭಾರಂಭ

0

ಗುತ್ತಿಗಾರಿನ ಕೆಳಗಿನ ಪೇಟೆಯ ರಿಷಬ್ ಕಾಂಪ್ಲೆಕ್ಸ್ ನಲ್ಲಿ ಮಾ.27 ರಂದು ಮಯೂರ ಬೇಕ್‌ಹೌಸ್ ಶುಭಾರಂಭಗೊಂಡಿತು.

ಮುಖಂಡ ವೆಂಕಟ್ ವಳಲಂಬೆ ರಿಬ್ಬನ್ ತುಂಡರಿಸಿ, ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಲೋಕೇಶ್ವರ ಡಿ.ಆರ್ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.

ವೆಂಕಟ್ ದಂಬೆಕೋಡಿ, ಸನತ್ ಮುಳುಗಾಡು, ಪುರುಷೋತ್ತಮ ಬದಿಯಡ್ಕ, ಶಾಂತಪ್ಪ ಇಜ್ಜೇಲುಮಕ್ಕಿ, ಪರಶುರಾಮ ಚಿಲ್ತಡ್ಕ, ವಿನ್ಯಾಸ್ ಕೊಚ್ಚಿ, ದಯಾನಂದ ಕನ್ನಡ್ಜ, ಎಸ್ ರಾಜಾ, ಶ್ರೀಮತಿ ಚಿಂತಾಮಣಿ, ಬೋಬಿ ಅಲೆಕ್ಸ್, ಅಂಗಡಿ ಮಾಲಕರಾದ ಚಂದ್ರಶೇಖರ ವಳಲಂಬೆ, ಸತೀಶ್ ಪೈಕ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ಜಯಂತ ತಳೂರು ಕಾರ್ಯಕ್ರಮ ನಿರೂಪಿಸಿದರು.
ಎಲ್ಲಾ ತರಹದ ಬೇಕರಿ, ಕೇಕ್ ಐಟಂಗಳು, ತಂಪು ಪಾನೀಯ, ಸ್ನ್ಯಾಕ್ಸ್ ಲಭ್ಯವಿರುವುದಾಗಿ ಮಾಲಕರು ತಿಳಿಸಿದ್ದಾರೆ.