ತೊಡಿಕಾನ ಜಾತ್ರಾ ಪ್ರಯುಕ್ತ ಬೃಹತ್ ಸ್ವಚ್ಛತಾ ಕಾರ್ಯಕ್ರಮ

0


ತೊಡಿಕಾನ ಜಾತ್ರಾ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಬ್ರಹತ್ ಶ್ರಮಾದಾನ ಕಾರ್ಯಕ್ರಮ ಎ. ೫ ರಂದು ಬೆಳಿಗ್ಗೆ ವಾರಣಾಸಿ ಗುಂಡಿಯ ಸ್ವಚ್ಛತೆ ಪ್ರಾರಂಭಿಸಿ ಉದ್ಘಾಟಿಸಲಾಯಿತು.


ಸುಮಾರು 3೦೦ ಜನರ ತಂಡ ದೇವಾಲಯದ ಆವರಣ, ವಾರಣಾಸಿ ಗುಂಡಿ, ಮತ್ಸ್ಯತೀರ್ಥದ ಬಳಿ, ದೇವಾಲಯದ ಗೋಪುರ, ದೇವಸ್ಥಾನದ ಅಂಗಣ, ದೇವಾಲಯದ ಹೊರಗೆ ತೊಡಿಕಾನ ಅರಂತೋಡು ರಸ್ತೆ ಬದಿ ಕಾಡುಕಡಿಯುವ ಕಾರ್ಯಕ್ರಮ ನಡೆಯಿತು.
ಅನೇಕ ಸಂಘ ಸಂಸ್ಥೆ, ಭಜನಾ ತಂಡ, ಯುವಕ, ಯುವತಿ ಮಂಡಲ, ಧರ್ಮಸ್ಥಳ ಗ್ರಾಮಭಿವೃದ್ಧಿ, ಮಹಿಳಾ ತಂಡದವರು ಉಪಸ್ಥಿತರಿದ್ದರು.