ಸುಳ್ಯ ಕಸಬಾ ಗ್ರಾಮದ ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ, ಶ್ರೀ ಗುಳಿಗ ದೈವ, ಸ್ವಾಮಿ ಕ್ಷೇತತ್ರ, ವ್ಯವಸ್ಥಾಪನಾ ಆಡಳಿತ ಕಾರ್ಯ ಸೇವಾ ಸಮಿತಿ ಟ್ರಸ್ಟ್ ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದ ಸನ್ನಿಧಿಯಲ್ಲಿ ಕಾಲಾವಧಿ ಶ್ರೀ ಮೊಗೇರ್ಕಳ ದೈವಗಳ ನೇಮೋತ್ಸವವು ಎ.4, 5ರಂದು ವಿಜೃಂಭಣೆಯಿಂದ ನಡೆಯಿತು.















ಎ. 4 ರಂದು ಪೂರ್ವಾಹ್ನ ಗಣಪತಿ ಹವನ, ಸಂಜೆ ಶ್ರೀ ಗುಳಿಗ ದೈವದ ನೇಮ, ಪ್ರಸಾದ ವಿತರಣೆ, ದೀಪಾರಾಧನೆ. ಬಳಿಕ ಶ್ರೀ ನಾಗಬ್ರಹ್ಮ ದೇವರಿಗೆ ಮಹಾಪೂಜೆ. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಬಳಿಕ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು. ರಾತ್ರಿ ಸತ್ಯದೇವತೆ ಶ್ರೀ ತನ್ನಿ ಮಾಣಿಗ ದೈವದ ನೇಮ. ರಾತ್ರಿ ಪಾತ್ರಿಗಳ ದರ್ಶನ, ಎ. 5ರಂದು ಬೆಳಗ್ಗೆ ಪ್ರಸಾದ ವಿತರಣೆ ನಡೆಯಿತು.
ಎ. 5 ರಂದು ಬೆಳಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮ ನಡೆಯಿತು. ನಂತರ ಪ್ರಸಾದ ವಿತರಣೆ ನಡೆಯಿತು. ಕೊರಗಜ್ಜ ದೈವದ ಹರಕೆಯ ನೇಮ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರು, ಸಮಿತಿಯವರು, ಊರ, ಪರವೂರ ಭಕ್ತಾದಿಗಳು ಉಪಸ್ಥಿತರಿದ್ದು ದೈವದ ಗಂಧ ಪ್ರಸಾದ ಸ್ವೀಕರಿಸಿದರು.







