ಸಾಂದೀಪ್ ಶಾಲೆಗೆ ಅಯಾಲ್ ವಾಸಿ ಬಂದಂ ವಾಟ್ಸಪ್ ಗ್ರೂಪ್ ವತಿಯಿಂದ ಚಯರ್ ಕೊಡುಗೆ

0

ಸುಳ್ಯ ಬೊರುಗುಡ್ಡೆ ಪರಿಸರದ ನಿವಾಸಿಗಳ ವಾಟ್ಸಪ್ ಗ್ರೂಪ್ ಅಯಾಲ್ ವಾಸಿ ಬಂದಂ ಇದರ ವತಿಯಿಂದ ಸಾಂದೀಪ್ ವಿಶೇಷ ಚೇತನ ಮಕ್ಕಳ ಶಾಲೆಗೆ 25 ಚಯರ್ ಗಳನ್ನು ಕೊಡುಗೆಯಾಗಿ ನೀಡಿದರು.

ಅಯಾಲ್ ವಾಸಿ ಬಂದಂ ಇದರ ಅಧ್ಯಕ್ಷರಾದ ಅಬ್ದುಲ್‌ ಲತೀಫ್ ಹರ್ಲಡ್ಕ ಶಾಲೆಗೆ ಚಯರನ್ನು ಹಸ್ತಾಂತರ ಮಾಡಿದರು .
ಶಿಕ್ಷಣಾಧಿಕಾರಿ ವೈ ಎಸ್ ಹರಗಿ ,
ಸಾಂದೀಪ್ ವಿಶೇಷ ಶಾಲೆ ಅಧ್ಯಕ್ಷ ಎಂ ಬಿ ಸದಾಶಿವ
ಬಿ ಎಸ್ ಜಿ ಗ್ರೂಪ್ಸ್ ನ ಆಡಳಿತ ನಿರ್ದೇಶಕ ರಾಶೀದ್ ಅಡ್ಕಾರ್,
ಹಿರಿಯ ಪತ್ರಕರ್ತ ಅಬ್ದುಲ್ಲಾನಾವೂರು ಉದ್ಯಮಿಗಳಾದ ಎನ್ ಇ ಮಹಮ್ಮದ್ ಕುಂಙಿ ಅಡ್ಕಾರ್, ಇಕ್ಬಾಲ್ ಬೊರುಗುಡ್ಡೆ,ಹಾರಿಶ್ ಬೊರುಗುಡ್ಡೆ,
ಯುವ ಉದ್ಯಮಿ ಉಸ್ಮಾನ್ ಪಾಝ್, ಮಿಸ್ಬಾ ಅಡ್ಕಾರ್ ಉಪಸ್ಥಿತರಿದ್ದರು, ಸಾಂದೀಪ್ ಶಾಲೆಯ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ಸಂಯೋಜಿಸಿದರು.