ಕಾಸರಗೋಡು ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು ಕಾಸರಗೋಡು ಕ್ಷೇತ್ರದ ಎನ್. ಡಿ.ಎ ಅಭ್ಯರ್ಥಿ ಅಶ್ವಿನಿ ಬಿ.ಎಲ್. ಪರವಾಗಿ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಐವರ್ನಾಡಿನ ಎಸ್.ಎನ್.ಮನ್ಮಥರವರ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಯಿತು.














ಎ.5 ರಂದು ಬೆಳಿಗ್ಗೆ ಕಾಸರಗೋಡಿನ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಯಿತು.

ಈ ಸಂದರ್ಭದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಎಸ್.ಎನ್.ದೇವಿಪ್ರಸಾದ್ ಕೊಪ್ಪತ್ತಡ್ಕ,ಬೆಳ್ಳಾರೆಯ ಉದ್ಯಮಿ ಪದ್ಮನಾಭ ಬೀಡು,ಪ್ರಭಾಕರ ಕುತ್ಯಾಡಿ,ಶೇಖರ ಮಡ್ತಿಲ,ವಿನಯ್ ಕೋಡ್ತೀಲು, ಚಂದ್ರಕಾಂತ ಕೋಡ್ತೀಲು, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ,ತಾಲೂಕು ಪಂಚಾಯತ್ ಸದಸ್ಯ ಜಯಾನಂದ ಕುಲ, ಮೋಹನ ಬಾರೆತ್ತಡ್ಕ,ತಿಮ್ಮಪ್ಪ ಬಾರೆತ್ತಡ್ಕ, ಎಸ್ಸಿ ಮೋರ್ಚಾ ಸದಸ್ಯ ಜಯಕರ ಮತ್ತಿತರರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು.







