ಅಡ್ಕಾರ್ ಬಳಿ ಸ್ಕೂಟಿ ಸ್ಕಿಡ್ಡಾಗಿ ಬಿದ್ದು ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಗಾಯ

0

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸುಳ್ಯ ತಹಶೀಲ್ದಾರ್ ಮಂಜುಳಾ

ಅಡ್ಕಾರು ದ್ವಾರದ ಬಳಿ ಸ್ಕೂಟಿ ವಾಹನ ಸ್ಕಿಡ್ಡಾಗಿ ರಸ್ತೆಗೆ ಬಿದ್ದು ಸ್ಕೂಟಿಯಲ್ಲಿದ್ದ ಪತಿ,ಪತ್ನಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡ ಘಟನೆ ಏ 13 ರಂದು ಸಂಜೆ ನಡೆದಿದೆ.

ಇದೇ ಸಂದರ್ಭದಲ್ಲಿ ಈ ಮಾರ್ಗವಾಗಿ ತಮ್ಮ ಇಲಾಖಾ ವಾಹನದಲ್ಲಿ ಬರುತ್ತಿದ್ದ ಸುಳ್ಯ ತಹಶೀಲ್ದಾರ್ ಮಂಜುಳಾ ರವರು ಕೂಡಲೇ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಸ್ವತಹ ತಹಶೀಲ್ದಾರ್ ರವರೇ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ತಂದಿದ್ದಾರೆ.ತಹಶೀಲ್ದಾರರ ವಾಹನದಲ್ಲಿ ಕಂದಾಯ ನಿರೀಕ್ಷಕರಾದ ಅವಿನ್ ರಂಗತಮಲೆ ಹಾಗೂ ಜಾಲ್ಸೂರು ಗ್ರಾಮ ಸಹಾಯಕರಾದ ಶಾಹಿನರವರು ಇದ್ದು ಅವರು ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ತರುವಲ್ಲಿ ಸಹಕರಿಸಿದ್ದಾರೆ.

ಗಾಯಾಳು ಜಯನಗರ ನಿವಾಸಿ ಯತೀಶ್ ಮತ್ತು ಮನೆಯವರಾಗಿದ್ದು ಅವರು ತಮ್ಮ ಮಗಳನ್ನು ನವೋದಯ ಶಾಲೆಗೆ ಸೇರಿಸಲು ಪುತ್ತೂರಿಗೆ ಹೋಗಿ ಮರಳಿ ಬರುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಸಣ್ಣಪುಟ್ಟ ಗಾಯವಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರ ಮನೆಗೆ ತೆರಳಿರುವುದಾಗಿ ತಿಳಿದುಬಂದಿದೆ.