ಪಲ್ಲಕ್ಕಿಯಲ್ಲಿ ರಾಯರ ಪಟ್ಟಣಸವಾರಿ,ಗುರುರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ : ಮಠದ ಟ್ರಸ್ಟಿಯವರಿಂದ ಪತ್ರಿಕಾ ಗೋಷ್ಠಿ














ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದ 8ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಎ.21ರಿಂದ 22ರ ತನಕ ಗುರು ರಾಯರ ಮಠದಪ್ರಧಾನಅರ್ಚಕರಾದ ವೇದಮೂರ್ತಿ ಶ್ರೀಹರಿ ಎಳಚಿತ್ತಾಯರ ಮಾರ್ಗದರ್ಶನದಲ್ಲಿ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಎ. 14 ರಂದು ಸುಳ್ಯದ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ವಿವರ ನೀಡಿದರು.
ಎ. 21 ರಂದು ಪೂರ್ವಾಹ್ನ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ
ಸಂಜೆ ಸುಳ್ಯ ಶ್ರೀ ಚೆನ್ನಕೇಶವ ಭಜನಾ ಮಹಿಳಾ ತಂಡದವರಿಂದ ಭಜನಾ ಕಾರ್ಯಕ್ರಮ ಬಳಿಕ 5.00 ರಿಂದ ರಾಯರ ಭಕ್ತ ಸಮೂಹದೊಂದಿಗೆ ಆಕರ್ಷಕ ಕುಣಿತ ಭಜನೆ, ಚೆಂಡೆ ವಾದನದೊಂದಿಗೆ ರಾಯರ ಪಲ್ಲಕ್ಕಿಯಲ್ಲಿ ಪಟ್ಟಣ ಸವಾರಿಯು ಮಠದಿಂದ ಹೊರಟು ಜೂನಿಯರ್ ಕಾಲೇಜು ರಸ್ತೆಯಲ್ಲಿ ಸಾಗಿ ನಗರದ ರಾಜ್ಯ ಹೆದ್ದಾರಿಯಲ್ಲಿ ಸಾಗಿ ಬಂದು ರಥಬೀದಿಯಾಗಿ ಚೆನ್ನಕೇಶವದೇವಸ್ಥಾನದಿಂದ ಮುಂದುವರಿದು ಮಠಕ್ಕೆ ಹಿಂತಿರುಗಿವಿಶೇಷಪೂಜೆಯಾಗಿ ಸಂಪನ್ನಗೊಳ್ಳಲಿದೆ. ಮರುದಿನ ಬೆಳಗ್ಗೆ
ಶಾಂತಿನಗರ ದೀಪಾಂಜಲಿ ಭಜನಾಮಂಢಳಿಯವರಿಂದ ಭಜನೆ, ಅರ್ಚಕರಿಂದ ಪಂಚ ವಿಂಶತಿ ಕಲಶ ಪೂಜೆ, ಕಲಶಾಭಿಷೇಕ, ಶ್ರೀ ರಾಘವೇಂದ್ರ ಅಷ್ಟಾಕ್ಷರಿ ಮಂತ್ರ ಹೋಮ, ಶ್ರೀ ರಾಮ ತಾರಕ ಮಂತ್ರ ಹೋಮ ನಡೆದು ಮಧ್ಯಾಹ್ನ ಅಲಂಕಾರಮಹಾಪೂಜೆಯಾಗಿಅನ್ನಸಂತರ್ಪಣೆಯಾಗಲಿದೆ. ಸಂಜೆ ಶ್ರೀ ಸದಾಶಿವ ಭಜನಾ ಸಂಘ ಆಲೆಟ್ಟಿ ಯವರಿಂದ ಭಜನೆ, ಬಳಿಕ
ಆಶ್ಲೇಷಾ ಬಲಿ ಪೂಜೆಯಾಗಿ ರಾತ್ರಿ ರಂಗಪೂಜೆಯು ನಡೆದು ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆಯಾಗಲಿರುವುದು ಎಂದು ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀಕೃಷ್ಣ ಸೋಮಯಾಗಿ ಯವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟಿಗಳಾದ ರಮೇಶ್ ಆರ್. ಕೆ, ರಾಮ್ ಕುಮಾರ್ ಹೆಬ್ಬಾರ್, ಗಂಗಾಧರ ಮಟ್ಟಿಯವರು ಉಪಸ್ಥಿತರಿದ್ದರು.







